ಕಡೆಕಾರು: ಗೋಡೆಗೆ ಬೈಕ್ ಡಿಕ್ಕಿ: ಉದ್ಯಾವರ ಎಸ್ ಡಿಎಂ ಕಾಲೇಜಿನ ವಿದ್ಯಾರ್ಥಿ ಮೃತ್ಯು

ಉಡುಪಿ: ನಿಯಂತ್ರಣ ತಪ್ಪಿದ ಬೈಕೊಂದು ಅಂಗಡಿಯ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಉದ್ಯಾವರ ಎಸ್ ಡಿಎಂ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಉಡುಪಿ ತಾಲೂಕಿನ ಕಡೆಕಾರಿನ ಸಮೀಪ ಬುಧವಾರ ಮಧ್ಯರಾತ್ರಿ ನಡೆದಿದೆ.

ಬೀದರ್ ಜಿಲ್ಲೆಯ ರಿಷಿಕೇಶ್ (23) ಮೃತ ವಿದ್ಯಾರ್ಥಿ. ಈತ ಉದ್ಯಾವರ ಎಸ್ ಡಿಎಂ ಆಯುರ್ವೇದ ಕಾಲೇಜಿನಲ್ಲಿ ಬಿಎಎಸ್ ಎಂ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದು, ಕುತ್ಪಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು. ನಿನ್ನೆ ರಾತ್ರಿ ಸುಮಾರು 12.30ಕ್ಕೆ ಕುತ್ಪಾಡಿಯಿಂದ ಮಲ್ಪೆ ಬೀಚ್ ಗೆ ತನ್ನ ಬೈಕ್ ನಲ್ಲಿ ಒಬ್ಬನೇ ಹೋಗಿದ್ದು, ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.