ಉಡುಪಿ :ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಇಂದು ಉಡುಪಿಗೆ ಭೇಟಿ ನೀಡಿದಾಗ ಉಡುಪಿ ಜಿಲ್ಲಾ ಬಿಜೆಪಿ ವಕ್ತಾರ ಕೆ. ರಾಘವೇಂದ್ರ ಕಿಣಿ ಉಡುಪಿ ಕಡೆಗೋಲು ಕೃಷ್ಣನ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಸಹವಕ್ತಾರ ಗಿರೀಶ್ ಅಂಚನ್, ಬಿಜೆಪಿ ಉಪಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಾಲಕೃಷ್ಣ ಶೆಟ್ಟಿ, ರಾಘವೇಂದ್ರ ಉ, ಶಿವರಾಮ್ ಕಾಡಿಮಾರ, ಚಂದ್ರಶೇಖರ್ ಪ್ರಭು ಇನ್ನಿತರು ಉಪಸ್ಥಿತರಿದ್ದರು.












