ಕಚ್ಚೂರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಆಡಳಿತ ಮಂಡಳಿ ಚುನಾವಣೆ: ಅಧ್ಯಕ್ಷರಾಗಿ ಚಂದ್ರಶೇಖರ್ ಕೆ. ಉಪಾಧ್ಯಕ್ಷರಾಗಿ ರಾಮ ಭಂಡಾರಿ ಹೆಚ್ ಪುನರಾಯ್ಕೆ

ಮಂಗಳೂರು: ಕಚ್ಚೂರು ಕ್ರೆಡಿಟ್ ಕೋ.ಅಪರೇಟಿವ್ ಸೊಸೈಟಿ ಇದರ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಆಡಳಿತ ಮಂಡಳಿಯು ಅವಿರೋಧವಾಗಿ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಚಂದ್ರಶೇಖರ್ ಕೆ. ಹಾಗೂ ಉಪಾಧ್ಯಕ್ಷರಾಗಿ ರಾಮ ಭಂಡಾರಿ ಹೆಚ್ ಪುನರಾಯ್ಕೆಯಾಗಿರುತ್ತಾರೆ. ನಿರ್ದೇಶಕರಾಗಿ ರವೀಂದ್ರನಾಥ ಉಳ್ಳಾಲ್, ರಘುವೀರ ಭಂಡಾರಿ, ದಿವಾಕರ ಶಂಬೂರು, ರಾಜಾ ಬಂಟ್ವಾಳ್, ಶಶಿಧರ್ ಕೆ., ಬಿ.ಎಸ್.ಭಂಡಾರಿ, ಕುಮಾರ್ ಭಂಡಾರಿ, ಹರೀಶ್ ಪಿ. ಭಂಡಾರಿ, ಅಶೋಕ್ ಜಿ., ಶೇಖರ್ ಹೆಚ್., ಶಾಂತಾ ಬಿ.ಎಸ್., ರಮನಾಥ ಭಂಡಾರಿ, ರಮೇಶ್ ಸಿ.ಎಂ. ಭಂಡಾರಿ ಹಾಗೂ ಶಶಿಕಲಾ ಕೆ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಹಕಾರ ಚುನಾವಣಾ ಆಯೋಗದ ಮೂಲಕ ಚುನಾವಣಾ ಪ್ರಕ್ರಿಯೆ ನಡೆದಿದ್ದು ಸುಕನ್ಯಾ ತಾಲುಕು ಪಂಚಾಯತ್ ಯೋಜನಾಧಿಕಾರಿ ಪುತ್ತೂರು ಇವರು ರಿಟರ್ನಿಂಗ್ ಅಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಕಚ್ಚೂರು ಪ್ರಧಾನ ವ್ಯವಸ್ಥಾಪಕ ಪದ್ಮನಾಭ ಎಂ. ಉಪಸ್ಥಿತರಿದ್ದರು.