ಬ್ರಹ್ಮಾವರ: ಮನೆ ಗುಡಿಯೊಳಗೆ ದೇವರನ್ನು ಸ್ಥಾಪಿಸಿದರೆ ಸಾಲದು, ಮನದೊಳಗೆ ಭಗವಂತನನ್ನು ಪ್ರತಿಷ್ಠಾಪಿಸಬೇಕು. ಧರ್ಮ ಮಾನವೀಯ ಮೌಲ್ಯದ ಮೇಲೆ ನಿಂತಿದೆ. ನಾವೆಲ್ಲರೂ ಒಂದು ಎನ್ನುವ ಚಿಂತನೆ ದೇವಸ್ಥಾನದ ಮೂಲಕ ಮೂಡಬೇಕು ಎಂದು ಚಿತ್ರದುರ್ಗ ಶ್ರೀ ಮಾದರಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದರಚೆನ್ನಯ್ಯ ಸ್ವಾಮೀಜಿ ಹೇಳಿದರು.
ಅವರು ಇತಿಹಾಸ ಪ್ರಸಿದ್ಧ ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನ ಶ್ರೀ ಬಬ್ಬುಸ್ವಾಮಿ ಮೂಲಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ, ರಥೋತ್ಸವ, ವಾರ್ಷಿಕ ಜಾತ್ರಾ ಮಹೋತ್ಸವ ಸಂದರ್ಭ ಅಖಿಲ ಕರ್ನಾಟಕ ಶ್ರೀ ಬಬ್ಬುಸ್ವಾಮಿ ದೇಗುಲಗಳ ಹತ್ತು ಸಮಸ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಭಗವಂತ ನಮ್ಮ ಮನದೊಳಿದ್ದರೆ ನೆಮ್ಮದಿ, ಆನಂದ ದೊರೆಯುತ್ತದೆ. ದುರ್ಗುಣ ದೂರ ಮಾಡಿ, ಸದ್ಗುಣ ಬೆಳೆಸಿಕೊಳ್ಳುವುದೇ ಭಗವಂತನ ನಿಜವಾದ ಆರಾಧನೆ ಎಂದು ಶ್ರೀಗಳು ತಿಳಿಸಿದರು.
ಆಡಳಿತ ಮಂಡಳಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗೋಕುಲ್ ದಾಸ್ ಬಾರ್ಕೂರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ. ಅಧ್ಯಕ್ಷ ದಿನಕರ್ ಬಾಬು, ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಚಿಕ್ಕಮಗಳೂರು ಜಿ.ಪಂ. ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ತಾ.ಪಂ. ಸದಸ್ಯ ಚಂದ್ರಶೇಖರ ಶೆಟ್ಟಿ, ಬಾರ್ಕೂರು ಸೈಂಟ್ ಪೀಟರ್ ಚರ್ಚಿನ ಧರ್ಮಗುರು ರೆಫಾ| ಫಿಲಿಪ್ ನೇರಿ ಅರನ್ಹಾ, ಬಾರ್ಕೂರು ಜಮ್ಮು ಮಸೀದಿ ಗೌರವಧ್ಯಕ್ಷ ಬಿ. ಕಾಸಿಮ್ ಬಾರ್ಕೂರು, ಉದ್ಯಮಿ ಬಾರ್ಕೂರು ಶಾಂತಾರಾಮ ಶೆಟ್ಟಿ ವಿವಿಧ ದೇವಸ್ಥಾನ, ಸಂಘಗಳ ಮುಖ್ಯಸ್ಥರಾದ ಮಂಜುನಾಥ ರಾವ್, ಶ್ರೀಧರ ಆಚಾರ್ಯ, ಶಿವರಾಜ್ ಮಲ್ಲರ್, ಆನಂದ ಕುಂದರ್, ವಿಜಯನೇತ್ರ ದಡ್ಡಲ್ ಕಾಡ್, ವೈ.ಜಿ. ಸುರೇಶ್, ಸಂಕಪ್ಪ ಬೇಲೂರು, ಕುಶಲ್ ಸಾಗ್ ಡಾ| ವೈ.ಎಸ್. ಹೆಗ್ಡೆ, ಗಣೇಶ್ ಬಾರ್ಕೂರು, ಶ್ರೀನಿವಾಸ್ ಶೆಟ್ಟಿಗಾರ್, ವೆಂಕಟರಮಣ ಭಂಡಾರ್ ಕಾರ್, ಜಯಾನಂದ ಎಂ. ಪೂಜಾರಿ, ಅಣ್ಣಯ್ಯ ಶೇರೆಗಾರ್, ಮಧುಸೂದನ್, ಗಣೇಶ್ ಬಳೆಗಾರ್, ಕೆ.ಕೆ. ನಾಯ್ಕ್, ದೇವಳದ ಪದಾಧಿಕಾರಿಗಳಾದ ಚೆನ್ನಪ್ಪ ಮುಲ್ಕಿ, ಪ್ರೇಮಾನಂದ್, ರಘುರಾಮ್, ಕಮಲಾಕ್ಷ, ಬಾಬು ಮಲ್ಲಾರ್, ಶಿವಪ್ಪ ನಂತೂರು, ರವಿರಾಜ್, ಶಶಿಕಾಂತ್ ವಾಸುದೇವ ಹಂಗಾರಕಟ್ಟೆ, ದಯಾನಂದ್, ಶಂಕರ ಬೆಳಪು, ಕೆ.ಆರ್. ಕೃಷ್ಣ ಜನಾರ್ದನ ಬಿಜೈ, ಅರ್ಚಕ ವೃಂದ, ಸಿಬ್ಬಂದಿ ಉಪಸ್ಥಿತರಿದ್ದರು. ಸತೀಶ್ಚಂದ್ರ ಚಿತ್ರಪಾಡಿ ನಿರೂಪಿಸಿದರು.