ಕಾಬೂಲ್​ ಏರ್​ಪೋರ್ಟ್​ ರಾಕೆಟ್​ ದಾಳಿ: ಸಾವು- ನೋವಿನ ಆತಂಕ

ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್​ ಏರ್​ಪೋರ್ಟ್​ ಮೇಲೆ ಇಂದು ಮುಂಜಾನೆ 5 ರಾಕೆಟ್​ಗಳಿಂದ ದಾಳಿ ನಡೆದಿದೆ. ಮೊದಲು ಏರ್​ಪೋರ್ಟ್​ನ ಮೇಲೆ ಹಾರಾಟ ನಡೆಸಿ, ಬಳಿಕ ಏರ್ಪೋರ್ಟ್ ಮತ್ತು ಸುತ್ತಮುತ್ತ ದಾಳಿ ಫೈರಿಂಗ್ ಮಾಡಿವೆ.

ಇನ್ನು ಅಮೆರಿಕ ಸೇನೆ ರಾಕೆಟ್​​ಗಳನ್ನ ಸಿ-ರ್ಯಾಮ್ ಡಿಫೆನ್ಸ್ ಸಿಸ್ಟಮ್ ಮೂಲಕ ಹೊಡೆದೋಡಿಸಲಾಗಿದೆ. ಏರ್​ಪೋರ್ಟ್​ನಲ್ಲಿ ಆರ್ಟಿಲರಿ ಮೊರ್ಟರ್ಸ್​ಗಳನ್ನ ಅಳವಡಿಸಲಾಗಿತ್ತು. ಇವುಗಳ ಮೂಲಕ ಅಮೆರಿಕ ಸೈನಿಕರು ರಾಕೆಟ್ ದಾಳಿಯನ್ನ ಎದುರಿಸಿದ್ದಾರೆ ಎಂಬ ಮಾಹಿತಿ ಇದೆ.

ಇನ್ನು ದಾಳಿಯಲ್ಲಿ ಈವರೆಗೆ ಯಾವುದೇ ಸಾವು ನೋವಿನ ವರದಿಗಳಾಗಿಲ್ಲ. ಕೆಲವು ಕಾರ್​​ಗಳು ದಾಳಿಯಿಂದ ಬೆಂಕಿಗಾಹುತಿಯಾಗಿವೆ ಎನ್ನಲಾಗಿದೆ. ಇನ್ನು ದಾಳಿ ಹಿಂದಿನ ಕೈವಾಡ ಯಾರದ್ದೆಂಬುದು ಈವರೆಗೆ ತಿಳಿದುಬಂದಿಲ್ಲ. ದಾಳಿಯ ಬಗ್ಗೆ ಅಮೆರಿಕ ವೈಟ್ ಹೌಸ್ ದೃಢೀಕರಿಸಿದೆ.