ಉಡುಪಿ: ಟೀಮ್ ಸಹರಾ ಇವರ ಆಶ್ರಯದಲ್ಲಿ ನಡೆದ ಕಬ್ಬಡಿ ಪಂದ್ಯಾಟವನ್ನು ಕೆ ಕೃಷ್ಣಮೂರ್ತಿ ಆಚಾರ್ಯ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹರೀಶ್ ಶೆಟ್ಟಿ, ಶ್ರೀಮತಿ ಗೀತಾಂಜಲಿ ಸುವರ್ಣ, ಅಮೃತಾ ಕೃಷ್ಣ ಮೂರ್ತಿ, ನಿರೂಪಮ ಪ್ರಸಾದ್ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಕೀರ್ತಿ ಶೆಟ್ಟಿ, ಸಂಕಪ್ಪ ವಕೀಲರು, ಬಾಲಕೃಷ್ಣ ನಿಟ್ಟೂರು, ಉಮೇಶ್ ಕಪ್ಪೆಟ್ಟು, ನೀತಾ ಪ್ರಭು, ಸುಜಾತ ಶೆಟ್ಟಿ, ಮತ್ತು ದಿವಾಕರ್ ಸನಿಲ್ ಹಾಗೂ ತಂಡದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಬ್ಬಡಿ ಪಂದ್ಯಾಟದಲ್ಲಿ ಉಭಯ ಜಿಲ್ಲೆಯ ಪ್ರತಿಷ್ಠಿತ ತಂಡಗಳು ಆಗಮಿಸಿದ್ದವು. ಫೈನಲ್ ನಲ್ಲಿ ಹೈ ವೆ ಫ್ರೆಂಡ್ಸ್ ಕಪ್ಪೆಟು ಪ್ರಥಮ ಸ್ಥಾನ ಹಾಗೂ ಟೀಮ್ ಮಹಾಲಕ್ಷ್ಮೀ ಉಚ್ಚಿಲ ದ್ವಿತೀಯ ಸ್ಥಾನ ಪಡೆಯಿತು.
ಕೆ ಕೃಷ್ಣ ಮೂರ್ತಿ ಆಚಾರ್ಯ, ಪ್ರದೀಪ್ ಶೆಟ್ಟಿ, ನವೀನ್ ಶೆಟ್ಟಿ ಕಡೆಕಾರ್, ನಿತೇಶ್ ಶೆಟ್ಟಿ, ರೋಹಿತಾಕ್ಷ ಉದ್ಯಾವರ ಹಾಗೂ ವಾಮನ್ ಪಾಲನ್ ವಿಜೇತರನ್ನು ಅಭಿನಂದಸಿದರು.
ಸತೀಶ್ ಚಂದ್ರ ಶೆಟ್ಟಿ ಚಿತ್ರ ಪಾಡಿ ನಿರೂಪಿಸಿ, ಅಭಿಜಿತ್ ಪಾಂಡೇಶ್ವರ ವಂದಿಸಿದರು.