ಖಗೋಳ ಶಾಸ್ತ್ರದ ಕುತೂಹಲಿಗಳಿಗೆ ಸಂಭ್ರಮಿಸುವ ಕ್ಷಣವೊಂದು ಸೋಮವಾರ, ಸೆಪ್ಟೆಂಬರ್ 26ರಂದು ದೊರಕಲಿದೆ. ಸೌರಮಂಡಲದ ಅತ್ಯಂತ ಬಲಶಾಲಿ ಅನಿಲ ದೈತ್ಯ ಗ್ರಹವಾದ ಗುರು ಅಥವಾ ಬ್ರಹಸ್ಪತಿಯು 59 ವರ್ಷಗಳ ಬಳಿಕ ಭೂಮಿಗೆ ಅತಿ ಸಮೀಪ ಬರಲಿದೆ. ಆ ದಿನದಂದು ಭೂಮಿಯಿಂದ ನೋಡಿದಾಗ ಗುರುವು ಸೂರ್ಯನ ನೇರ ಎದುರು ಅಂದರೆ ಸೂರ್ಯನ ವಿರುದ್ದ ದಿಕ್ಕಿನಲ್ಲಿರುತ್ತದೆ. ಈ ಖಗೋಳ ವ್ಯವಸ್ಥೆಯನ್ನು ‘ವಿರೋಧ’ ಎಂದು ಕರೆಯಲಾಗುತ್ತದೆ. ಸೂರ್ಯ ಪಶ್ಚಿಮದಲ್ಲಿ ಮುಳುಗುವಾಗ ಗ್ರಹವು ಪೂರ್ವದಲ್ಲಿ ಉದಯಿಸುವುದನ್ನು ವಿರೋಧ ಎನ್ನುತ್ತಾರೆ. ಈ ಸಮಯದಲ್ಲಿ ಗುರುವು ಅಸಾಮಾನ್ಯ ಪ್ರಕಾಶ ಹೊಂದಿರುತ್ತದೆ ಮತ್ತು ಅತ್ಯಂತ ದೊಡ್ಡದಾಗಿ ಕಾಣುತ್ತದೆ.
ಗುರು ಸೌರಮಂಡಲದ ಅತ್ಯಂತ ಪ್ರಬಲ ಗ್ರಹ. ಗುರುವಿನ ಗುರುತ್ವಾಕರ್ಷಣೆಗೆ ಸಿಲುಕದ ವಸ್ತುಗಳು ಆಕಾಶದಲ್ಲಿಲ್ಲ. ಖಗೋಲ ವಿಜ್ಞಾನಿಗಳು ಗುರುವನ್ನು ಎರಡನೆ ಸೂರ್ಯ ಎಂದೂ ಕರೆಯುತ್ತಾರೆ. ಗುರುಗ್ರಹವು ಭೂಮಿಯತ್ತ ಬರುವ ಉಲ್ಕೆ ಮತ್ತು ಕ್ಷುದ್ರಗ್ರಹಗಳ ಪಥವನ್ನು ಬದಲಾಯಿಸಬಲ್ಲ ತಾಕತ್ತು ಹೊಂದಿದೆ. ಗುರು ಮತ್ತು ಶುಕ್ರನ ಗುರುತ್ವಾಕರ್ಷಣೆಯಿಂದ ಭೂಮಿಯ ಮೇಲೆ ಹವಾಮಾನ ಬದಲಾವಣೆಗಳಾಗುತ್ತವೆ. ಭಾರತೀಯ ಜ್ಯೋತಿಷ್ಯ ಶಾಸ್ತ್ರದಲ್ಲೂ ಗುರುವಿಗೆ ಅತಿ ಹೆಚ್ಚು ಪ್ರಾಧಾನ್ಯತೆ ನೀಡಲಾಗಿದೆ. ಗುರು ಅಥವಾ ಬ್ರಹಸ್ಪತಿಯನ್ನು ದೇವತೆಗಳ ‘ಗುರು’ ಎಂದು ಬಣ್ಣಿಸಲಾಗಿದೆ.
ಗುರುವು ಜಾತಕದಲ್ಲಿ ಉಚ್ಛ ಸ್ಥಾನ್ದಲ್ಲಿದ್ದರೆ ಉನ್ನತಿ, ಆಶಾವಾದ, ಯಶಸ್ಸು ಮತ್ತು ಉದಾರತೆಗಳು ವ್ಯಕ್ತಿಯಲ್ಲಿರುತ್ತವೆ. ನೀಚ ಸ್ಥಾನದಲ್ಲಿರುವ ಗುರು ಅತಿಯಾದ ಖರ್ಚು, ಸೋಮಾರಿತನ, ಪ್ರೀತಿ, ಐಷಾರಾಮ, ಅವಿಧೇಯತೆ, ಆರೋಗ್ಯ ಸಮಸ್ಯೆ ಮತ್ತು ಅತಿಯಾದ ಆತ್ಮವಿಶ್ವಾಸಕ್ಕೆ ಕಾರಣನಾಗುತ್ತದೆ.
ವ್ಯಕ್ತಿಯು ಉನ್ನತ ಸ್ಥಾನಕ್ಕೇರಬೇಕಾದರೆ ಆತನಿಗೆ ಗುರು ಬಲವಿರಬೇಕು. ಗುರುವು ಆತ್ಮವನ್ನು ಉನ್ನತಿಗೆ ಏರಿಸಬಲ್ಲ ಗ್ರಹವಾದ್ದರಿಂದ ಜ್ಯೊತಿಷ್ಯಶಾಸ್ತ್ರದಲ್ಲಿ ಗುರುವಿಗೆ ಹೆಚ್ಚು ಪ್ರಾಮುಖ್ಯವನ್ನು ನೀಡಲಾಗಿದೆ.