ಮಂಗಳೂರು: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ’11ನೇ ಆಳ್ವಾಸ್ ಪ್ರಗತಿ-ಬೃಹತ್ ಉದ್ಯೋಗ ಮೇಳ’ ಜೂನ್. 21 ಮತ್ತು 22ರಂದು ಮೂಡುಬಿದಿರೆಯ ವಿದ್ಯಾಗಿರಿ ಕ್ಯಾಂಪಸ್ನಲ್ಲಿ ನಡೆಯಲಿದೆ.
ಈ ಸಂಬಂಧ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಆಳ್ವಾಸ್ ಪ್ರಗತಿ-2019ರ ಆವೃತ್ತಿಯಲ್ಲಿ ಹಲವು ರೀತಿಯಲ್ಲಿ ಉದ್ಯೋಗ ಪಡೆಯಲು ಅವಕಾಶ ಕಲ್ಪಿಸಲಾಗುವುದು. ಪದವಿ ಮತ್ತು ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್, ಎಂಜಿನಿಯರಿಂಗ್, ಆರ್ಟ್ಸ್, ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್, ಬೇಸಿಕ್ ಸೈನ್ಸ್, ನರ್ಸಿಂಗ್, ಐಟಿಐ, ಡಿಪ್ಲೊಮಾ, ಪಿಯುಸಿ ಮತ್ತು ಎಸ್ಎಸ್ಎಲ್ಎಸಿ ಆದ ಪ್ರತಿಭಾವಂತರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಐಟಿ, ಐಟಿಎಸ್, ಮ್ಯಾನುಫ್ಯಾಕ್ಚರಿಂಗ್, ಹೆಲ್ತ್ಕೇರ್ ಮತ್ತು ಫಾರ್ಮಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆಟೋಮೊಬೈಲ್, ಬ್ಯಾಂಕಿಂಗ್ ಮತ್ತು ಹಣಕಾಸು, ಹಾಸ್ಪಿಟಾಲಿಟಿ, ಶಿಕ್ಷಣ ಮತ್ತು ಎನ್ಜಿಒಗಳನ್ನು ಪ್ರತಿನಿಧಿಸುವ ಉನ್ನತ ಕಂಪೆನಿಗಳು ಪಾಲ್ಗೊಳ್ಳುತ್ತಿವೆ ಎಂದು ಡಾ. ಆಳ್ವಾ ತಿಳಿಸಿದರು.
ಉತ್ಪಾದನಾ ಕ್ಷೇತ್ರದ ಪ್ರಮುಖ ಕಂಪೆನಿಗಳಾದ ಕೀರ್ಲೋಸ್ಕರ್ ಟೊಯೊಟೋ ಟೆಕ್ಸ್ಟೈಲ್ಸ್ಮೆಷಿನರಿ ಪ್ರೈಲಿ., ಟೊಯೊಟೋ ಇಂಡಸ್ಟ್ರೀಸ್ ಎಂಜಿನ್ ಇಂಡಿಯಾ, ಅಜೇಕ್ಸ್ ಫೀಯೋರಿ, ನೆಕ್ಸ್ಟೀರ್, ಏಸ್ ಮ್ಯಾನುಫ್ಯಾಕ್ಚರಿಂಗ್, ಬಿಲ್ಫೋರ್ಜ್ನಲ್ಲಿ ಬಿಇ ಮೆಕ್ಯಾನಿಕಲ್, ಡಿಪ್ಲೊಮಾ ಪದವೀಧರರಿಗೆ ಈ ವರ್ಷ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಿವೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ವೈದ್ಯಕೀಯ, ಪ್ಯಾರಾ ಮೆಡಿಕಲ್, ಎಂಜಿನಿಯರಿಂಗ್, ವಾಣಿಜ್ಯ ಮತ್ತು ನಿರ್ವಹಣೆ, ಬೇಸಿಕ್ಸೈನ್ಸ್, ನರ್ಸಿಂಗ್, ಐಟಿಐ ಮತ್ತು ಡಿಪ್ಲೊಮಾ ಹಾಗೂ ಸ್ನಾತಕೋತ್ತರ ಪದವೀಧರ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಬಿ.ಕಾಂ., ಎಂಬಿಎ, ಎಂ.ಕಾಂ., ಬಿಬಿಎಂ, ಬಿಎಸ್ಸಿ. ಪದವೀಧರರಿಗೆ ಈ ಬಾರಿಯ ಉದ್ಯೋಗಮೇಳದಲ್ಲಿ ಹೆಚ್ಚಿನ ಅವಕಾಶಗಳು ಲಭಿಸಲಿವೆ ಎಂದರು.
ಪ್ರತಿಷ್ಟಿತ ಕಂಪೆನಿಗಳು ಭಾಗಿ:
ಪ್ರತಿಷ್ಠಿತ ಕಂಪೆನಿಗಳಾದ ಕೆಫೆ ಕಾಫಿ ಡೇ, ನಿಂಜಾ ಕಾರ್ಟ್, ಇನೋವಾ ಡೀಸೆಲ್ ಜನರೇಟರ್ ಪ್ರೈ ಲಿ., ಮನಿರಂಜನ್ ಡೀಸೆಲ್ ಸೇಲ್ಸ್ ಆ್ಯಂಡ್ ಸರ್ವಿಸ್ಲಿಮಿಟೆಡ್ ಎಂಬಿಎ ಪದವೀಧರರನ್ನು ಆಯ್ಕೆಮಾಡಲಿವೆ. ಮೈಸೂರು ಭಾಗದ ಕೇನ್ಸ್ ಟೆಕ್ನಾಲಜೀಸ್, ಟಿವಿಎಸ್ ಮೋಟರ್ ಸೈಕಲ್, ಈಕ್ವಲೈಸ್ ಆರ್ಸಿಎಂ ಸರ್ವೀಸಸ್, ಜೆಕೆ ಟಯರ್,ಸುಗಮ್ ಎಲಿವೇಟರ್, ಸನ್ರಿಯಾ ಎಂಜಿನಿಯರಿಂಗ್, ರಾಣೆ ಮದ್ರಾಸ್, ಜುಬಿಲಿಯೆಂಟ್ ಫಾರ್ಮಾ ಕಂಪೆನಿಗಳು ತಮ್ಮ ಪಾಲ್ಗೊಳ್ಳುವಿಕೆಯನ್ನು ದೃಢೀಕರಿಸಿವೆ. ಅಮೆಜಾನ್, ಇವೈ, ಥಾಮ್ಸನ್ ರಾಯಿಟರ್ಸ್, ಒರ್ಯಾಕಲ್, ಎಂಫಸಿಸ್ ಮುಂತಾದ ಐಟಿ ಕಂಪೆನಿಗಳು ಭಾಗವಹಿಸಲಿವೆ. ಮಂಗಳೂರು ಮೂಲದ ಐಟಿ ಕಂಪೆನಿಗಳಾದ ಕೋಡ್ಕ್ರಾಫ್ಟ್ ಟೆಕ್ನಾಲಜಿಸ್, ನೋವಿಗೋ ಸೊಲ್ಯುಷನ್ಸ್, ದಿಯಾ ಸಿಸ್ಟಮ್ಸ್ ತಮ್ಮ ಭಾಗವಹಿಸುವಿಕೆಯನ್ನು ದೃಢಪಡಿಸಿವೆ. ಕ್ಲೌಡ್ನೈನ್, ವೋಕ್ಹಾರ್ಟ್, ಅಪೋಲೋ ಹೆಲ್ತ್ಕೇರ್ ಆಸ್ಪತ್ರೆಗಳು ನರ್ಸಿಂಗ್, ಬಿಪಿಟಿ, ಎಂಎಲ್ಟಿ ಪದವೀಧರರನ್ನು ನಿರೀಕ್ಷಿಸುತ್ತಿವೆ ಎಂದು ಅವರು ತಿಳಿಸಿದರು.
ಕರ್ನಾಟಕ ಮಾತ್ರವಲ್ಲದೇ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಿಂದ 15,000-20,000 ಉದ್ಯೋಗಾಕಾಂಕ್ಷಿಗಳು ಭಾಗವಹಿಸಲಿದ್ದಾರೆ. ಇದುವರೆಗೆ 58 ಪ್ರತಿಷ್ಠಿತ ಕಂಪೆನಿಗಳು ನೋಂದಾಯಿಸಿಕೊಂಡಿದ್ದು, ಇನ್ನೂ 187 ಕಂಪೆನಿಗಳು ಭಾಗವಹಿಸುವಿಕೆಯನ್ನು ದೃಢಪಡಿಸಿವೆ.
ನೋಂದಾವಣೆ ಅಗತ್ಯ:
ಉದ್ಯೋಗ ಮೇಳದಲ್ಲಿ ಭಾಗವಹಿಸಲಿಚ್ಛಿಸುವ ಎಲ್ಲ ಅಭ್ಯರ್ಥಿಗಳಿಗೆ ಆನ್ಲೈನ್ ನೋಂದಣಿ ಕಡ್ಡಾಯವಾಗಿದೆ. ಕಂಪೆನಿ ಹಾಗೂ ಅಭ್ಯರ್ಥಿಗಳಿಗೆ ದಾಖಲಾತಿ ಉಚಿತ. ಆನ್ಲೈನ್ ನೋಂದಣಿಗೆ http://alvaspragati.comಗೆ ಭೇಟಿ ನೀಡಬಹುದು. ನೋಂದಣಿ ಪ್ರಕ್ರಿಯೆ ಮುಕ್ತವಾಗಿದ್ದು, ಜೂ. 21 ಮತ್ತು 22 ಎರಡೂ ದಿನ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಭಾಗವಹಿಸುಔರು ತಮ್ಮ 5-10 ಪಾಸ್ಪೋರ್ಟ್ ಫೋಟೊಗಳು, ಅಭ್ಯರ್ಥಿಯ ರೆಸ್ಯೂಮ್, ಎಲ್ಲ ಅಂಕಪಟ್ಟಿಗಳ ದೃಢೀಕೃತ ಜೆರಾಕ್ಸ್ ಪ್ರತಿಗಳು, ಆನ್ಲೈನ್ ನೋಂದಣಿ ಸಂಖ್ಯೆ, ಐಡಿ ಸಹಿತ ವಿದ್ಯಾಗಿರಿ ಕ್ಯಾಂಪಸ್, ಮೂಡುಬಿದಿರೆಯಲ್ಲಿ ಜೂನ್ 21 ಮತ್ತು 22 ರಂದು ಬೆಳಗ್ಗೆ 8ಕ್ಕೆ ಹಾಜರಾಗಬೇಕು ಎಂದರು.
ಗೋಷ್ಠಿಯಲ್ಲಿ ಆಳ್ವಾಸ್ನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಅಸಿಸ್ಟೆಂಟ್ ಟಿಪಿಒ ಸುಶಾಂತ್ ಅನಿಲ್ ಲೋಬೊ, ಪಿಆರ್ಒ ಡಾ| ಪದ್ಮನಾಭ್ ಶೆಣೈ, ಮಾಧ್ಯಮ ಸಂಯೋಜಕ ಪ್ರಸಾದ್ ಶೆಟ್ಟಿ ಇದ್ದರು.