ಬೆಂಗಳೂರು: ಸಿ.ಆರ್.ಝಡ್. ವ್ಯಾಪ್ತಿಯ ಮರಳು ತೆರವುಗೊಳಿಸುವ ವಿಚಾರವಾಗಿ ಈ ಹಿಂದೆ ಆಗಸ್ಟ್ ತಿಂಗಳಿಂದ ಅನುಮತಿ ದೊರೆತಿದ್ದು, ಇದೀಗ ಅದು ಮಾರ್ಪಾಡಾಗಿ ಸೆಫ್ಟೆಂಬರ್ 31ರಿಂದ ತೆರವುಗೊಳಿಸುವಂತೆ ಮುಂದೂಡಲಾಗಿತ್ತು.
ಅದರೆ 2 ತಿಂಗಳು ಮುಂದಕ್ಕೆ ಹಾಕಿರುವ ಆದೇಶವನ್ನು ಬದಲಾವಣೆ ಮಾಡುವಂತೆ ಸೋಮವಾರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಉಡುಪಿ ಶಾಸಕರಾದ ಕೆ. ರಘುಪತಿ ಭಟ್ ಹಾಗೂ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರು ಈ ಆದೇಶವನ್ನು ಮಾರ್ಪಾಡಿಸಿ ಜುಲೈ 31ರಿಂದಲೇ ಮರಳು ದಿಬ್ಬ ತೆರವುಗೊಳಿಸುವಂತೆ ಅನುಮತಿ ನೀಡಬೇಕೆಂದು ಮನವಿ ಮಾಡಿದರು.