ಉಡುಪಿ: ಶಿರೂರು ಮಠದ ಲಕ್ಷ್ಮೀವರತೀರ್ಥ ಶ್ರೀಪಾದರು ವೃಂದಾವನಸ್ಥರಾಗಿ ಒಂದು ವರುಷ ಕಳೆದ ಹಿನ್ನಲೆಯಲ್ಲಿ ಜುಲೈ 19 ರಂದು ಉಪ್ಪೂರಿನಲ್ಲಿರುವ ಸ್ಪಂದನ ವಿಶೇಷ ಮಕ್ಕಳ ಆಶ್ರಮದಲ್ಲಿ ಶಿರೂರು ಶ್ರೀಗಳ ಅಭಿಮಾನಿಗಳು ಶಿರೂರು ಸ್ವಾಮಿಗಳ ಸಂಸ್ಮರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಅಂದು ಬೆಳ್ಳಿಗ್ಗೆ 11.30 ಕ್ಕೆ ಭಜನಾ ತಂಡದವರಿಂದ ಭಜನೆ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಕೇಮಾರು ಶ್ರೀಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿರುವರು.
ಇದೇ ಸಂದರ್ಭದಲ್ಲಿ ಸ್ಪಂದನ ಶಾಲೆಯ ಮಕ್ಕಳಿಗೆ ಶಿರೂರು ಸ್ವಾಮೀಜಿಗಳ ಹೆಸರಿನಲ್ಲಿ ಅನ್ನದಾನ ಕೂಡ ನಡೆಯಲಿದೆ.
ಶಿರೂರು ಶ್ರೀಗಳು ವೃಂದಾವನಸ್ಥರಾಗಿ ಒಂದು ವರುಷ ಕಳೆದರು ಅವರ ವೃಂದಾವನವನ್ನು ನಿರ್ಮಾಣ ಮಾಡದ ಹಿನ್ನಲೆಯಲ್ಲಿ ಶಿರೂರು ಅಭಿಮಾನಿಗಳು ಸಂಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಈ ಕಾರ್ಯಕ್ರಮಕ್ಕೆ ಸಮಸ್ತ ಶಿರೂರು ಸ್ವಾಮೀಜಿ ಅಭಿಮಾನಿಗಳು ಭಾಗವಹಿಸುವಂತೆ ಅಭಿಮಾನಿ ಸಮಿತಿ ವಿನಂತಿಸಿಕೊಂಡಿದೆ.