ಹೊಟ್ಟೆ ತುಂಬಾ ನಗು-ಚೂರು ಕಣ್ಣೀರು ತರಿಸುವ “ಜುಗ್ಗ ನನ್ ಗಂಡ” 2 : ಟ್ರೆಂಡಿಂಗ್ ನಲ್ಲಿದೆ ಗಂಡ-ಹೆಂಡ್ತಿಯ ಸುಂದರ ಕತೆ

ಕಷ್ಟ ಪಟ್ಟು ದುಡಿಯೋ ಗಂಡ, ದುಡಿದದ್ದನ್ನೆಲ್ಲಾ ನೀರಂತೆ ಅದು ಬೇಕು ಇದು ಬೇಕು ಎಂದು ಖರ್ಚು ಮಾಡೋ ಹೆಂಡ್ತಿ, ಒಂದಷ್ಟು ಜಗಳ, ಸಿಟ್ಟಿನ ಸನ್ನಿವೇಶಗಳ ಮೂಲಕ ನಗಿಸುವ ಗಂಡ-ಹೆಂಡತಿಯ ಪಂಚಿಂಗ್ ಡೈಲಾಗ್ ಗಳು, ಕಾಮಿಡಿ ದೃಶ್ಯಗಳ ನಡುವೆಯೂ ಆಳವಾಗಿ ಗಂಭೀರತೆ ಇದ್ದಂತೆ ಕಾಣಿಸುವ ನಟನೆ. ಕೊನೆಗೆ ಜಗಳ ಸಿಟ್ಟು ಮಾಡಿಕೊಂಡೇ ಇರುವ  ಹೆಂಡ್ತಿ, ಬದುಕಿನ ಅನಿವಾರ್ಯತೆಯಲ್ಲಿ ಗಂಡನ ಶ್ರಮವನ್ನು ನಿಯತ್ತಿನ ಬದುಕನ್ನು ಹೇಗೆ ಅರ್ಥಮಾಡಿಕೊಂಡು  ಮಿಡಿಯುತ್ತ ಹೇಗೆ ಬದಲಾಗುತ್ತಾಳೆ ಎನ್ನುವುದು “ಜುಗ್ಗ ನನ್ ಗಂಡ” 2 ದ ಹೈಲೈಟ್ಸ್

ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಹಿಡಿದಿಟ್ಟುಕೊಂಡುಬಿಡುವ “ಜುಗ್ಗ ನನ್ ಗಂಡ”2 ನಮ್ಮ  ಬದುಕಲ್ಲೇ ನಡೆಯುತ್ತಿರುವ ವಾಸ್ತವದ ಕತೆ ಎನ್ನುವ ಭಾವನೆ ಹುಟ್ಟಿಸುತ್ತದೆ. ಈಗಾಗಲೇ ಜುಗ್ಗ ನನ್ ಗಂಡ ದ ಮೊದಲ ಭಾಗ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿ ಸಖತ್ ಟ್ರೆಂಡಿಂಗ್ ನಲ್ಲಿತ್ತು. ಇದೀಗ “ಜುಗ್ಗ ನನ್ ಗಂಡ” ಭಾಗ ಎರಡರ ಸರದಿ.

“ಜುಗ್ಗ ನನ್ ಗಂಡ”2 ನವಿರಾದ ಹಾಸ್ಯ, ದಾಂಪತ್ಯ ಜೀವನದ ಮಧುರ ಭಾವನೆಗಳನ್ನು ನಮ್ಮದೇ ಬದುಕಿನಲ್ಲಿ ನಡೆಯುವಂತೆ ಕಟ್ಟಿಕೊಟ್ಟುವ ಭಾವನಾತ್ಮಕ ವಿಡಿಯೋ ಪ್ರಸ್ತುತಿ . ಇದೇ ಕಾರಣಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಇದರ ವಿಡಿಯೋ ಕ್ಲಿಪ್ಲಿಂಗ್ ಗಳು ಸಿಕ್ಕಾಪಟ್ಟೆ ಶೇರ್ ಆಗುತ್ತಿದೆ. ಹೊರನೋಟಕ್ಕೆ ದೊಡ್ಡದ್ದೊಂದು ಸಿನಿಮಾದಂತಿರುವ  ಈ ವಿಡಿಯೋ ಕತೆಯನ್ನು ನಿರ್ದೇಶಿಸಿರುವುದು  ಸುಮಂತ್ ಆಚಾರ್ಯ ಅವರು. ಸೂಜಿ ಪ್ರೊಡಕ್ಶನ್ ನ ಶಿವು ಅವರು ಇದನ್ನು ನಿರ್ಮಾಣ ಮಾಡಿದ್ದಾರೆ. ಗಂಡ ಮತ್ತು ಹೆಂಡತಿಯಾಗಿ  ಪ್ರತೀಕ್ ಮತ್ತು ಪಾಯಲ್ ಬೆಂಗಪ್ಪ ಇವರಿಬ್ಬರ ನಟನೆಯೂ ಸೊಗಸಾಗಿದೆ, ಕಾಡುವಂತಿದೆ.  ಚೇತನ್ ದುರ್ಗ,ಕೃಷ್ಣ ಶೇಂದ್ರೆ, ಆರ್ಯಾ ಸ್ವರೂಪ್, ಶಕ್ತಿರಾಜ, ಚಿಂಟು, ಹೇಮಂತ್ ಯುಬಿಸಿ, ಮಧು ಭಾರದ್ವಾಜ್, ಚಾರ್ಲಿ ಕುಮಾರ್, ರೋಹಿಣಿ, ಯಮುನಾ, ಗುರು, ಶಿವ, ಸವಿತಾ ಇವರೆಲ್ಲಾ ಇಲ್ಲಿ ನಟನೆಯಲ್ಲಿ ಮಿಂಚಿದ್ದಾರೆ. ರೋಹಿತ್ ಸಾಗರ್ ಸೋವರ್ ಅವರ ಹಿತವಾದ ಸಂಗೀತವಿದೆ. ಕೂಲ್ ಮಗಾ ಸ್ಟುಡಿಯೋಸ್ ನ ಕ್ರಿಯಾಶೀಲ ಪ್ರಸ್ತುತಿ ಇದಾಗಿದೆ.  

ಸಂಸಾರದಲ್ಲಿ ಸಿಟ್ಟು, ಜಗಳ, ಎಲ್ಲವೂ ಸಾಮಾನ್ಯ, ಆದರೆ ಅವೆಲ್ಲವೂ ಪ್ರೀತಿಯಲ್ಲಿಯೇ ನಡಿಯೋದು, ಒಳ್ಳೆಯ ಭಾವನೆಯಿಂದ ಸಂಸಾರ ಕೂಡ ನೆಮ್ಮದಿಯ ಗೂಡಾಗುತ್ತದೆ ಎನ್ನುವ  “ಜುಗ್ಗ ನನ್ ಗಂಡ”2 ಕೊನೆಗೂ ನಗಿಸುತ್ತ ಪ್ರೇಕ್ಷಕರನ್ನು ಕಾಡಿಸುತ್ತ ಮುಕ್ತಾಯಗೊಳ್ಳುತ್ತದೆ. ನೀವೂ ಒಮ್ಮೆ  “ಜುಗ್ಗ ನನ್ ಗಂಡ”2 ನೋಡಿ ಬಿಡಿ.