ಬಿಜೆಪಿ ಹೊಸ ಶಕ್ತಿ ತುಂಬಲಿರುವ ಜೆ.ಪಿ. ನಡ್ಡಾ ಭೇಟಿ: ವೀಣಾ ಎಸ್.ಶೆಟ್ಟಿ

ಉಡುಪಿ: ಭಾರತೀಯಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರವರು ಬೂತ್ ಸಮಿತಿ ಅಧ್ಯಕ್ಷರೊಂದಿಗೆ ನಡೆಸುವ ಸಭೆಯು ಉಡುಪಿ ಜಿಲ್ಲಾ ಬಿಜೆಪಿಗೆ ಹೊಸ ಶಕ್ತಿ ತುಂಬಲಿದೆ ಎಂದು ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ತಿಳಿಸಿದರು.

ಅವರು ರಾಷ್ಟ್ರೀಯ ಅಧ್ಯಕ್ಷರ ಭೇಟಿಯ ಬಗ್ಗೆ ಜಿಲ್ಲಾ ಮಹಿಳಾ ಮೋರ್ಚಾದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಉಡುಪಿ ಜಿಲ್ಲೆಯ 5 ಸ್ಥಾನಗಳ ಬಿಜೆಪಿ ಗೆಲುವಿನ ಅಂತರ ಈ ಸಭೆಯಿಂದ ಹೆಚ್ಚಲಿದೆ ಎಂದು ತಿಳಿಸಿದರು.

ಮಂಗಳೂರು ಪ್ರಭಾರಿ ಉದಯಕುಮಾರ್ ಶೆಟ್ಟಿ, ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್‌ ಪಕ್ಷದ ಅಧ್ಯಕ್ಷರ ಜಿಲ್ಲಾ ಪ್ರವಾಸದ ಪೂರ್ವ ತಯಾರಿ ಬಗ್ಗೆ ಮಾರ್ಗದರ್ಶನ ನೀಡಿದರು. ಸಭೆಯಲ್ಲಿ ಜಿಲ್ಲಾ ಬಜೆಪಿ ಉಪಾಧ್ಯಕ್ಷೆ ಗೀತಾಂಜಲಿ ಸುವರ್ಣ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮನೋಹರ್‌ಎಸ್. ಕಲ್ಮಾಡಿ, ಸದಾನಂದ ಉಪ್ಪಿನಕುದ್ರು, ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಸುಜಲಾ ಸತೀಶ್, ಅಶ್ವಿನಿ ಶೆಟ್ಟಿ, ಲಕ್ಷ್ಮೀ, ದಯಾಶಿನಿ, ಪೂರ್ಣಿಮರತ್ನಾಕರ್, ನೀರಜಾ ಶೆಟ್ಟಿ, ವಿದ್ಯಾ ಶ್ಯಾಮ ಸುಂದರ್, ಕಾವೇರಿ ಗಾಣಿಗ, ಸರೋಜಾ ಶೆಣೈ, ಸುಗುಣ ಉಪಸ್ಥಿತರಿದ್ದರು.