ಇದೀಗ ಈ ಇನ್ನೋವೇಟಿವ್ ಫಿಲ್ಮ್ ಸಿಟಿ ಸಂಪೂರ್ಣವಾಗಿ ಬದಲಾವಣೆ ಆಗುವ ಮೂಲಕ ಹೊಸ ರೂಪದಲ್ಲಿ ಜಾಲಿವುಡ್ ಆಗಿ ಬದಲಾಗಿದೆ. ಈ ಪಾರ್ಕ್ನಲ್ಲಿ 33 ಮುಖ್ಯ ಆಕರ್ಷಣೆಗಳಿವೆ. ವಾಟರ್ ರೈಡ್ಗಳಲ್ಲದೇ, ಡೈನೋ ಪಾರ್ಕ್, 5 ರೆಸ್ಟೋರೆಂಟ್ಗಳು, 2 ರೆಸ್ಟ್ರೋ ಪಬ್ಗಳು..ಹೀಗೆ ಮನೆ ಮಂದಿಯೆಲ್ಲಾ ಜೊತೆಯಾಗಿ ಒಟ್ಟಿಗೆ ಕಾಲ ಕಳೆಯಲು ಸೂಕ್ತವಾದ ಸುಂದರ ತಾಣವಾಗಿದೆ.
ಇನ್ನೋವೇಟಿವ್ ಫಿಲ್ಮ್ ಸಿಟಿ ಅಂದಾಕ್ಷಣ ನೆನಪಾಗುವುದು ವೀಕೆಂಡ್ನಲ್ಲಿ ಫ್ಯಾಮಿಲಿ ಸಮೇತ ಅಡ್ವೆಂಚರ್ಸ್, ಮಕ್ಕಳಿಗೆ ಮನರಂಜನೆ ಸಿಗುವ ಎಂಟರ್ಟೈನ್ಮೆಂಟ್ ತಾಣ.’ಜಾಲಿವುಡ್ ಸ್ಟುಡಿಯೋಸ್ ಆಯಂಡ್ ಅಡ್ವೆಂಚರ್ಸ್’ ಥೀಮ್ ಪಾರ್ಕ್ ಅನ್ನು ಡಿಸಿಎಂ ಡಿಕೆಶಿ ಮತ್ತು ನಟ ಶಿವ ರಾಜ್ಕುಮಾರ್ ಉದ್ಘಾಟಿಸಿದರು.
ಈ ಜಾಲಿವುಡ್ ಅನ್ನು ಉದ್ಘಾಟನೆಗೊಳಿಸಿದ ಬಳಿಕ ಮಾತನಾಡಿದ ಡಿಸಿಎಂ, “ನಾನು ನಾಲ್ಕು ವರ್ಷಗಳಿಂದ ಯಾವುದೇ ಖಾಸಗಿ ಕಾರ್ಯಕ್ರಮಗಳ ಉದ್ಘಾಟನೆಗೆ ಕಾರ್ಯದೊತ್ತಡದಿಂದ ಹೋಗಿರಲಿಲ್ಲ. ಇದೇ ಮೊದಲು ಬಂದಿರುವುದು. ‘ಜಾಲಿವುಡ್’ ಚೆನ್ನಾಗಿದೆ. ಒಳ್ಳೆಯದಾಗಲಿ. ಇಡೀ ಬೆಂಗಳೂರಿನವರು ಹಾಗೂ ಬೇರೆ ಊರಿನವರು ಬಂದು ವೀಕ್ಷಿಸಲಿ” ಎಂದು ಶುಭ ಹಾರೈಸಿದರು.
ಇತ್ತೀಚೆಗೆ ರಾಜ್ಯ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಈ ‘ಜಾಲಿವುಡ್ ಸ್ಟುಡಿಯೋಸ್ ಆಯಂಡ್ ಅಡ್ವೆಂಚರ್ಸ್’ ಥೀಮ್ ಪಾರ್ಕ್ ಅನ್ನು ಉದ್ಘಾಟನೆ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸದ ಡಿ.ಕೆ ಸುರೇಶ್ ಹಾಗೂ ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ ಮತ್ತು ಜಾಲಿವುಡ್ ಸಂಸ್ಥಾಪಕರಾದ ಐಶರಿ ಕೆ ಗಣೇಶ್ ಈ ಕಾರ್ಯಕ್ರಮದ ಭಾಗವಾಗಿದ್ದರು.
ಬಳಿಕ ಕರುನಾಡ ಚಕ್ರವರ್ತಿ ಶಿವಣ್ಣ ಮಾತನಾಡಿ, “ಸ್ಯಾಂಡಲ್ವುಡ್, ಕಾಲಿವುಡ್, ಬಾಲಿವುಡ್ ಹೀಗೆ ಎಲ್ಲವೂ ಒಂದೇ ಕಡೆ ಸೇರುವ ಸ್ಥಳ ಜಾಲಿವುಡ್ ಆಗಲಿ. ಹಿಂದೆ ಇಲ್ಲಿ ಸಾಕಷ್ಟು ಚಿತ್ರಗಳ ಶೂಟಿಂಗ್ನಲ್ಲಿ ಭಾಗಿಯಾಗಿದ್ದೇನೆ. ಇಲ್ಲಿಗೆ ಬಂದಾಗ ಹಳೆಯ ದಿನಗಳು ನೆನಪಾದವು. ಗಣೇಶ್ ಅವರ ಈ ಪ್ರಯತ್ನಕ್ಕೆ ಎಲ್ಲರೂ ಪ್ರೋತ್ಸಾಹ ನೀಡಿ” ಎಂದರು.
“ಭಾರತೀಯ ಚಿತ್ರರಂಗಕ್ಕೆ ಸಮರ್ಪಿಸುತ್ತಿದ್ದೇವೆ. ಈ ಪಾರ್ಕ್ನಲ್ಲಿ 33 ಮುಖ್ಯ ಆಕರ್ಷಣೆಗಳಿವೆ. ವಾಟರ್ ರೈಡ್ಗಳಲ್ಲದೆ, ಡೈನೋ ಪಾರ್ಕ್, 5 ರೆಸ್ಟೋರೆಂಟ್ಗಳು, ಎರಡು ರೆಸ್ಟೋ ಪಬ್ಗಳು, ಹೀಗೆ ಮನೆಮಂದಿಯಲ್ಲಾ ಒಟ್ಟಾಗಿ ಕಾಲ ಕಳೆಯುವ ಒಂದು ಸ್ಥಳವಿದು. ಈ ಜಾಲಿವುಡ್ನಲ್ಲಿ ಮನರಂಜನೆ ಖಚಿತ. ಆಗಸ್ಟ್ 27ರಿಂದ ಈ ಜಾಲಿವುಡ್ ಅಧಿಕೃತವಾಗಿ ಪ್ರಾರಂಭವಾಗಲಿದೆ. ಇಂದು ಬಂದು ಉದ್ಘಾಟಿಸಿದ ಗಣ್ಯರಿಗೆ ಮತ್ತು ನನಗೆ ಮತ್ತು ನಮ್ಮ ತಂಡಕ್ಕೆ ಶುಭ ಹಾರೈಸುವುದಕ್ಕೆ ಬಂದ ಎಲ್ಲರಿಗೂ ಧನ್ಯವಾದಗಳು” ತಿಳಿಸಿದರು.
.”ಬಹಳ ವರ್ಷಗಳ ಕನಸು ಇಂದು ನನಸಾಗಿದೆ. ಕಳೆದ 30 ವರ್ಷಗಳಿಂದ ಶಿಕ್ಷಣ, ಆರೋಗ್ಯ, ಸಿನಿಮಾ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಮನೆ ಮಂದಿಯೆಲ್ಲಾ ಒಟ್ಟಿಗೆ ಸಮಯ ಕಳೆಯುವಂತಹ ಒಂದು ಥೀಮ್ ಪಾರ್ಕ್ ಮಾಡಬೇಕೆಂಬ ಆಸೆ ಇತ್ತು. ಹೀಗಿರುವಾಗಲೇ ಇನ್ನೋವೇಟಿವ್ ಫಿಲಂ ಸಿಟಿಯನ್ನು ಟೇಕ್ ಓವರ್ ಮಾಡುವ ಆಫರ್ ಬಂತು. ಕಳೆದ ಎರಡು ವರ್ಷಗಳಿಂದ ಪ್ರಕ್ರಿಯೆ ನಡೆಯುತ್ತಲೇ ಇದೆ. ಫಿಲಂ ಸಿಟಿಯಲ್ಲಿ ನವೀಕರಿಸಿರುವುದು ಅಷ್ಟೇ ಅಲ್ಲ. ಹಲವು ಮನರಂಜನೆ ಆಟಗಳನ್ನು ಹೊಸದಾಗಿ ಪ್ರಾರಂಭಿಸಿದ್ದೇವೆ” ಎಂದು ತಿಳಿಸಿದರು.
ಬೆಂಗಳೂರು ಮತ್ತು ಮೈಸೂರು ನಡುವೆ ಇರುವ ಬಿಡದಿ ಸಮೀಪ ಸುಮಾರು 40 ಎಕರೆ ಪ್ರದೇಶದಲ್ಲಿ ‘ಜಾಲಿವುಡ್ ಸ್ಟುಡಿಯೋಸ್ ಆಯಂಡ್ ಅಡ್ವೆಂಚರ್ಸ್’ ಥೀಮ್ ಪಾರ್ಕ್ ನಿರ್ಮಿಸಲಾಗಿದೆ. ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇಯಿಂದ 10 ನಿಮಿಷ ದೂರದಲ್ಲಿ ಈ ಜಾಲಿವುಡ್ ಸಿಗುತ್ತದೆ. ಥೀಮ್ ಪಾರ್ಕ್ನ ಪ್ರವೇಶ ದರ, ಮಾರ್ಗ ಮುಂತಾದ ಹಲವು ವಿಷಯಗಳಿಗೆ ಸಂಸ್ಥೆಯ ಅಧಿಕೃತ ವೆಬ್ಸೈಟ್ www.jollywood.co.in ಲಾಗಿನ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು.ಈ ಸುಂದರ ಕಾರ್ಯಕ್ರಮದಲ್ಲಿ ಸಂಸದರಾದ ಡಿ ಕೆ ಸುರೇಶ್, ಶಾಸಕ ಬಾಲಕೃಷ್ಣ ಸಹ ‘ಜಾಲಿವುಡ್’ಗೆ ಶುಭ ಕೋರಿದರು. ಸಿ.ಇ.ಒ ಆರವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವೇಲ್ಸ್ ಗ್ರೂಪ್ನ ಸಂಸ್ಥಾಪಕರಾದ ಐಶರಿ ಕೆ ಗಣೇಶ್ ಅವರ ಸಾರಥ್ಯದ ‘ಜಾಲಿವುಡ್’ ಸ್ಟುಡಿಯೋಸ್ ಮತ್ತು ಅಡ್ವೆಂಚರ್ಸ್ ಶುರುವಾಗಿದ್ದು, ಕನ್ನಡ ಸಿನಿಮಾ ಇಂಡಸ್ಟ್ರಿ ಅಲ್ಲದೇ ಪರಭಾಷೆಯ ಸಿನಿಮಾ ರಂಗದವರಿಗೆ ಅನುಕೂಲ ಆಗಲಿದೆ