ನವದೆಹಲಿ:ಆಯಿಲ್ ಇಂಡಿಯಾ ಸಂಸ್ಥೆ 2021ನೇ ಸಾಲಿನ ನೇಮಕಾತಿ ಆರಂಭಿಸಿದೆ. 535 ಫಿಟ್ಟರ್ ಟ್ರೇಡ್, ಬಾಯ್ಲರ್ ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಹಾಕಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 23, 2021ರೊಳಗೆ ಸೂಕ್ತ ಅರ್ಜಿ ನಮೂನೆಯೊಂದಿಗೆ ಸಲ್ಲಿಸಬಹುದು.
ಹುದ್ದೆ: 535 ಹುದ್ದೆ ಹೆಸರು: Fitter Trade, Boiler Attendant ಉದ್ಯೋಗ ಸ್ಥಳ: ಭಾರತದೆಲ್ಲೆಡೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಸೆಪ್ಟೆಂಬರ್ 23, 2021
ಹುದ್ದೆಗಳು: ಫಿಟ್ಟರ್, ಎಲೆಕ್ಟ್ರಿಷಿಯನ್, ಮೆಕ್ಯಾನಿಕ್ ಮೋಟರ್ ವೆಹಿಕಲ್ ಟ್ರೇಡ್, ಮಷಿನಿಸ್ಟ್, ಡ್ರಾಫ್ಟ್ ಮೇನ್, ಬಾಯ್ಲರ್ ಸಹಾಯಕ, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಇನ್ಸ್ಟ್ರೂಮೆಂಟ್ ಮೆಕ್ಯಾನಿಕ್, ಸರ್ವೆಯರ್, ವೆಲ್ಡರ್, ಟರ್ನರ್
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10 ಹಾಗೂ 12ನೇ ತರಗತಿ ಪಾಸ್. ಸಂಬಂಧಪಟ್ಟ ಟ್ರೇಡ್ ಅನುಭವ. ವಯೋಮಿತಿ: ವಿವಿಧ ಹುದ್ದೆಗಳಿಗೆ ಆಯಿಲ್ ಇಂಡಿಯಾ ನೇಮಕಾತಿ ನೋಟಿಫಿಕೇಷನ್ನಲ್ಲಿ ನೀಡಿರುವಂತೆ ಕನಿಷ್ಠ 18 ರಿಂದ ಗರಿಷ್ಠ 30 ವರ್ಷ(ಸೆಪ್ಟೆಂಬರ್ 23, 2021ರಂತೆ) ಅರ್ಹ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ. ಎಸ್ ಸಿ / ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷಗಳ ವಿನಾಯಿತಿ ಸಿಗಲಿದೆ.
ಅರ್ಜಿ ಶುಲ್ಕ: ಸಾಮಾನ್ಯ/ ಒಬಿಸಿ ಅಭ್ಯರ್ಥಿ: 200ರು ಎಸ್ ಸಿ / ಎಸ್ಟಿ/ ದಿವ್ಯಾಂಗ/ಮಾಜಿ ಯೋಧ/ ಆರ್ಥಿಕವಾಗಿ ಹಿಂದುಳಿದವರು: ಯಾವುದೇ ಶುಲ್ಕವಿಲ್ಲ. ಶುಲ್ಕಪಾವತಿ ವಿಧಾನ: ಆನ್ ಲೈನ್ ಮೂಲಕ ನೇಮಕಾತಿ ಪ್ರಕ್ರಿಯೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ(ಸಿಬಿಟಿ), ವೈಯಕ್ತಿಕ ಸಂದರ್ಶನ (ಪಿಐ). ಪ್ರಮುಖ ದಿನಾಂಕ: ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 24/08/2021
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 23/09/2021 ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಆಯಿಲ್ ಇಂಡಿಯಾ ಅಧಿಕೃತ ವೆಬ್ ತಾಣ ಗಮನಿಸಿ