ಅಜೀಮ್ ಪ್ರೇಮ್ ಜೀ ಫೌಂಡೇಶನ್ ನಲ್ಲಿ ಉದ್ಯೋಗಾವಕಾಶಗಳು

 

ಹುದ್ದೆ: ಸಂಪನ್ಮೂಲ ವ್ಯಕ್ತಿ

ಆಯ್ಕೆಯಾದ ಅಭ್ಯರ್ಥಿಗಳು ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯ ಶಿಕ್ಷಕರೊಂದಿಗೆ ಕಾರ್ಯನಿರ್ವಹಿಸುತ್ತಾ ಅವರ ವೃತ್ತಿಪರತೆಯನ್ನು ಅಭಿವೃದ್ದಿ ಪಡಿಸುವ ಮೂಲಕ ಉನ್ನತ ಸಾಮರ್ಥ್ಯವುಳ್ಳ ಶಿಕ್ಷಕರನ್ನಾಗಿಸಲು ಸಹಾಯಮಾಡುವುದು.

ವಿದ್ಯಾರ್ಹತೆ ಮತ್ತು ಅನುಭವ

# ಸ್ನಾತಕೋತ್ತರ ಪದವಿ ಮತ್ತು ಕನಿಷ್ಠ ಎರಡು ವರ್ಷ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಬೋಧನೆ ಮಾಡಿದ ಅನುಭವ ಅಥವಾ ಪದವಿ ಮತ್ತು ಕನಿಷ್ಠ ಐದು ವರ್ಷ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಬೋಧನೆ ಮಾಡಿದ ಅನುಭವ
# ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸರ್ಕಾರೇತರ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ

ಅರ್ಜಿ ಸಲ್ಲಿಸಲು: http://bit.do/KA-RP ಲಿಂಕನ್ನು ಬಳಸಿ. ಈ ಲಿಂಕ್ ಬಳಸಿ ಅರ್ಜಿ ಸಲ್ಲಿಸಿದ ಹಾಗೂ ಅರ್ಹ ಅಭ್ಯರ್ಥಿಗಳಿಗೆ ಮಾತ್ರವೆ ಲಿಖಿತ ಪರೀಕ್ಷೆಗೆ ಪ್ರವೇಶ ಪತ್ರ ಕಳುಹಿಸಲಾಗುವುದು.

ಆಯ್ಕೆಯದ ಅಭ್ಯರ್ಥಿಗಳು ಬೆಂಗಳೂರು, ವಿಜಯಪುರ, ಬಾಗಲಕೋಟೆ, ರಾಯಚೂರು, ಬೀದರ ಮತ್ತು ರಾಮನಗರ ಜಿಲ್ಲಾ ಸಂಸ್ಥೆಯ ಆಯೋಜಿಸಿದ ಶೆಕ್ಷಣಿಕ ಬ್ಲಾಕ್ ನಲ್ಲಿ ಕಾರ್ಯನಿರ್ವಹಿಸುವುದು.

ಹೆಚ್ಚಿನ ವಿವರಗಳಿಗೆ: http://careersazimpremjifoundation.org ಗೆ ಭೇಟಿ ನೀಡಿ.