ಓಎನ್ ಜಿ ಸಿ ನೂರಕ್ಕೂ ಹೆಚ್ಚಿನ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು . ಈ ಎಲ್ಲಾ ಹುದ್ದೆಗಳಿಗೆ ಪ್ರತೀ ತಿಂಗಳು 60 ಲಕ್ಷದಿಂದ ಒಂದುವರೆ ಲಕ್ಷದವರೆಗೂ ಸಂಬಳ ಇರುತ್ತದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಜನವರಿ 10 ರಿಂದ ಆರಂಭಗೊಂಡಿದೆ. ಅರ್ಜಿ ಸಲ್ಲಿಸಲು ಜವರಿ 24 ಕೊನೆಯ ದಿನ, ಲಿಖಿತ ಹಾಗೂ ಸಂದರ್ಶನದ ಮೂಲಕ ಆಯ್ಕೆ ನಡೆಸಲಾಗುವುದು.
ಯಾವುದೆಲ್ಲಾ ಹುದ್ದೆಗಳಿವೆ?
- ಮೆಕ್ಯಾನಿಕಲ್ – 23 ಹುದ್ದೆಗಳು, ಭೂವಿಜ್ಞಾನಿ – 5 ಹುದ್ದೆಗಳು, ಎಇಇ (ಉತ್ಪಾದನೆ) ಕೆಮಿಕಲ್ – 23 ಹುದ್ದೆಗಳು, AEE (ಉತ್ಪಾದನೆ) ಪೆಟ್ರೋಲಿಯಂ – 19 ಹುದ್ದೆಗಳು ಜಿಯೋಫಿಸಿಸ್ಟ್ (ಗ್ರೌಂಡ್) – 3, AEE (ಎಲೆಕ್ಟ್ರಿಕಲ್) – 10 ಹುದ್ದೆಗಳು, ಜಿಯೋಫಿಸಿಸ್ಟ್ (ವೇಲ್ಸ್) – 2 ಪೋಸ್ಟ್, AEE (ಡ್ರಿಲ್ಲಿಂಗ್) ಮೆಕ್ಯಾನಿಕಲ್ – 23 ಹುದ್ದೆಗಳು ಇನ್ನೂ ಹಲವು ಹುದ್ದೆಗಳಿವೆ.
ಅರ್ಹತೆಗಳೇನು?
ಸಂಬಂಧಿತ ವಿಷಯಗಳಲ್ಲಿ ಶೇ.60 ಅಂಕವಿರಬೇಕು. ಎಂಎಸ್ಸಿ, ಎಂಟೆಕ್ ಪದವಿ
ವಯಸ್ಸು ಎಷ್ಟಿರಬೇಕು?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯಸ್ಸು 26-42 ರ ನಡುವಿರಬೇಕು. ಇನ್ನೂ ಹೆಚ್ಚಿನ ಮಾಹಿತಿಗಾಗಿ ONGC ಯ ವೆಬ್ಸೈಟ್ ongcindia.com ಗೆ ಭೇಟಿ ಕೊಡಿ.