ಕುಂದಾಪುರ :ಜೂ. 25 ರಂದು ಉದ್ಯೋಗ ಮೇಳ

ಉಡುಪಿ : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉಡುಪಿ ಜಿಲ್ಲೆ ಮಣಿಪಾಲ, ಯುವ ಉದ್ಯೋಗಾಕಾಂಕ್ಷಿಗಳ ಸೇವಾ ಕೇಂದ್ರ(ಯಸ್ ಕೇಂದ್ರ) ಹಾಗೂ ಶ್ರೀ ಕಾಳಾವರ ವರದರಾಜ ಎಮ್ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಇವರ ವತಿಯಿಂದ ಜೂನ್ 24 ರಂದು ಕುಂದಾಪುರ ತಾಲೂಕಿನ ಕೋಟೇಶ್ವರ ಶ್ರೀ ಕಾಳಾವರ ವರದರಾಜ ಎಮ್ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ “ಉದ್ಯಮಶೀಲತಾ ಕೌಶಲ್ಯ ತರಬೇತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮ” ಇದರಲ್ಲಿ ಸಂದರ್ಶನ ಮತ್ತು ಸಂವಹನ ಕಲೆ ವ್ಯಕ್ತಿತ್ವ ಬೆಳವಣಿಗೆ ಬಗ್ಗೆ ಪೂರಕ ಮಾಹಿತಿ ಮಾರ್ಗದರ್ಶನ ಕಾರ್ಯಕ್ರಮ ಹಾಗೂ ಜೂನ್ 25 ರಂದು “ಉದ್ಯೋಗ ಮೇಳ”ವನ್ನು ಆಯೋಜಿಸಲಾಗಿರುತ್ತದೆ.

        ಈ ಉದ್ಯೋಗ ಮೇಳದಲ್ಲಿ ವಿವಿಧ ಖಾಸಗಿ ವಲಯದ ತಾಂತ್ರೀಕ ಮತ್ತು ತಾಂತ್ರೀಕೇತರ ಕಂಪೆನಿ/ಸಂಸ್ಥೆಗಳು ಭಾಗವಹಿಸಿ ತಮ್ಮ ಸಂಸ್ಥೆಗಳಲ್ಲಿ ಖಾಲಿ ಇರುವ ಉದ್ಯೋಗಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ.

       ಉದ್ಯೋಗಾಕಾಂಕ್ಷಿಗಳ ನೇಮಕ ಮಾಡಿಕೊಳ್ಳಲಿರುವುದರಿಂದ ಖಾಸಗಿ ವಲಯದಲ್ಲಿನ ಉದ್ಯೋಗಕ್ಕೆ ಆಸಕ್ತರಿರುವ, ಎಸ್.ಎಸ್.ಎಲ್.ಸಿ/ಪಿ.ಯು.ಸಿ/ಯಾವುದೇ ಪದವಿ/ಡಿಪ್ಲೋಮಾ ಹಾಗೂ ಐ.ಟಿ.ಐ ಕ್ಷೇತ್ರಕ್ಕೆ ಸಂಬಂಧಿಸಿದ ವಿದ್ಯಾರ್ಹತೆಯ ಅಭ್ಯರ್ಥಿಗಳು, ವಿದ್ಯಾರ್ಹತೆ ಅಂಕಪಟ್ಟಿ/ರೆಸ್ಯೂಮ್(ಬಯೋಡೇಟಾ) ಇತ್ಯಾದಿ ದಾಖಲೆಗಳೊಂದಿಗೆ ಜೂನ್ 25 ರಂದು ಬೆಳಗ್ಗೆ 9.30 ಕ್ಕೆ ಶ್ರೀ ಕಾಳಾವರ ವರದರಾಜ ಎಮ್ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕೋಟೇಶ್ವರದಲ್ಲಿ ನಡೆಯುವ ಉದ್ಯೋಗ ಮೇಳದಲ್ಲಿ ಹಾಜರಾಗುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳ ಪ್ರಕಟಣೆ ತಿಳಿಸಿದೆ.