ಜೆಸ್ರಿಲ್ ಗ್ಲೋಬಲ್ ಸರ್ವೀಸಸ್‌ನಲ್ಲಿದೆ ಉದ್ಯೋಗಾವಕಾಶ: ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ

ಬ್ರಹ್ಮಾವರ: ಜೆಸ್ರಿಲ್ ಗ್ಲೋಬಲ್ ಸರ್ವೀಸಸ್ ಎಲ್‌ಎಲ್‌ಪಿ ಸಂಸ್ಥೆಯಲ್ಲಿ ಆಮದು ಮತ್ತು ರಫ್ತು ವಿಭಾಗದ ಡಾಕ್ಯುಮೆಂಟೇಶನ್ ಹಾಗೂ ಗ್ರಾಹಕ ಸೇವಾ ಕಾರ್ಯನಿರ್ವಾಹಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಶಿಪ್ಪಿಂಗ್, ಲಾಜಿಸ್ಟಿಕ್ಸ್, ಫ್ರೈಟ್ ಫಾರ್ವರ್ಡಿಂಗ್, ಸಪ್ಲೈ ಚೈನ್ ಅಥವಾ ಸಂಬಂಧಿತ ಕ್ಷೇತ್ರಗಳಲ್ಲಿ 0ರಿಂದ 5 ವರ್ಷಗಳ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ.

ದುಬೈನಲ್ಲಿ ಸಂಬಂಧಿತ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವವರು ಹಾಗೂ ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್‌ನಲ್ಲಿ ಡಿಪ್ಲೊಮಾ ಪಡೆದ ಹೊಸ ಅಭ್ಯರ್ಥಿಗಳಿಗೂ ಅವಕಾಶವಿದೆ.

ಅರ್ಹತೆಗಳೇನು?

ಅಭ್ಯರ್ಥಿಗಳಿಗೆ ಇಂಗ್ಲಿಷ್ ಓದುವ, ಬರೆಯುವ ಹಾಗೂ ಮಾತನಾಡುವ ಸಾಮರ್ಥ್ಯ ಮತ್ತು ಹಿಂದಿ ಮಾತನಾಡುವ ಜ್ಞಾನ ಅಗತ್ಯ. ಉತ್ತಮ ಸಂವಹನ ಕೌಶಲ ಹಾಗೂ ಎಂಎಸ್ ಆಫೀಸ್ ಬಳಕೆಯ ಪರಿಣತಿ ಇರಬೇಕು.

ಆಯ್ಕೆಯಾದ ಅಭ್ಯರ್ಥಿಗಳು ಆಮದು ಮತ್ತು ರಫ್ತು ದಾಖಲೆಗಳ ನಿರ್ವಹಣೆ, ಸಾಗಣೆ ಪ್ರಕ್ರಿಯೆಗಳ ಮೇಲ್ವಿಚಾರಣೆ, ಗ್ರಾಹಕರಿಗೆ ಸಾಗಣೆಯ ಮಾಹಿತಿ ನೀಡುವುದು, ಗ್ರಾಹಕರು ಮತ್ತು ಕಾರ್ಯಾಚರಣೆ ತಂಡದ ನಡುವೆ ಸಮನ್ವಯ ಸಾಧಿಸುವುದು ಹಾಗೂ ದೈನಂದಿನ ಲಾಜಿಸ್ಟಿಕ್ಸ್ ಚಟುವಟಿಕೆಗಳನ್ನು ನಿರ್ವಹಿಸಬೇಕಾಗುತ್ತದೆ.

ಉದ್ಯೋಗದ ಸ್ಥಳ ಬ್ರಹ್ಮಾವರ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9731735725 ಸಂಪರ್ಕಿಸಬಹುದು ಅಥವಾ ತಮ್ಮ ಅರ್ಜಿಯನ್ನು [email protected] ಇಮೇಲ್‌ಗೆ ಕಳುಹಿಸಬಹುದು.