ಉನ್ನತಿ ಕೆರಿಯರ್ ಅಕಾಡೆಮಿ: ಉಡುಪಿ ಮಾಸಿಕ ಉನ್ನತಿ ಉದ್ಯೋಗ ಮೇಳದಲ್ಲಿ ಉದ್ಯೋಗಾವಕಾಶಗಳು

ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಪ್ರಸಿದ್ಧಿ ಪಡೆದಿರುವ ಹಾಗೂ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಪಾಲುದಾರ ಸಂಸ್ಥೆಯಾದ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯು ಈಗಾಗಲೇ 3000ಕ್ಕೂ ಅಧಿಕ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿದೆ. ಇದೀಗ ಜಿಲ್ಲೆಯ ಹಾಗೂ ರಾಜ್ಯದ ಇತರ ಯುವಕ-ಯುವತಿಯರಿಗೂ ಇದರ ಲಾಭವನ್ನು ವಿಸ್ತರಿಸಲು ಸಂಸ್ಥೆಯು ಪ್ರತಿ ತಿಂಗಳ ಎರಡನೇ ವಾರದಂದು ಉದ್ಯೋಗ ಮೇಳವನ್ನು ತನ್ನ ಉಡುಪಿಯ ಪಿಪಿಸಿ 1ನೇ ಅಡ್ಡರಸ್ತೆಯಲ್ಲಿರುವ ಕ್ಯಾಂಪಸ್ ನಲ್ಲಿ ಆಯೋಜಿಸಲಿದೆ. ಈ ಮೇಳದಲ್ಲಿ ಸ್ಥಳೀಯ ಹಾಗೂ ಇನ್ನಿತರ ಕಂಪೆನಿಗಳು ಭಾಗವಹಿಸಿ ಅಭ್ಯರ್ಥಿಗಳ ಸಂದರ್ಶವನ್ನು ನಡೆಸಿ ಉದ್ಯೋಗಾವಕಾಶ ಕಲ್ಪಿಸಲಿವೆ. ಆಸಕ್ತ ಅಭ್ಯರ್ಥಿಗಳು https://forms.gle/FzYxAHgsKFxUWy7K8
ಆನ್ಲೈನ್ ಲಿಂಕ್ ಮೂಲಕ ನೋಂದಾಯಿಸಿಕೊಂಡು, ಈ ಮೇಳಗಳಲ್ಲಿ ಭಾಗವಹಿಸಬಹುದು. ನೋಂದಣಿ ಮಾಡಿದ ಅಭ್ಯರ್ಥಿಗಳಿಗೆ ಸಂದರ್ಶನ ಎದುರಿಸುವ ಬಗ್ಗೆ ಒಂದು ದಿನದ ತರಬೇತಿ ನೀಡಿ ನಂತರ ಸಂದರ್ಶನದ ಅವಕಾಶವನ್ನು ಕಲ್ಪಿಸಲಾಗುವುದು.

ಸಂಸ್ಥೆಯ ಸ್ಥಾಪಕ ಪ್ರೇಮ್ ಪ್ರಸಾದ್ ಶೆಟ್ಟಿ ಮಾತನಾಡಿ,”ಇದೇ ಬರುವ ಜನವರಿ 12, 2023 ರಂದು “ರಾಷ್ಟ್ರೀಯ ಯುವ ದಿನಾಚಾರಣೆ” ಪ್ರಯುಕ್ತ ಈ ಕಾರ್ಯಕ್ರಮವನ್ನು ಸಂಸ್ಥೆಯು ಅಧಿಕೃತವಾಗಿ ಪ್ರಾರಂಭಿಸಿ, ಮುಂದಿನ ಒಂದು ವರ್ಷ ಮಾಸಿಕ ಉದ್ಯೋಗ ಮೇಳ ನಡೆಸಲಿದೆ.ಇದರ ಪೂರ್ವಭಾವಿಯಾಗಿ ಇಂದು ಸಂಸ್ಥೆಯಲ್ಲಿ ಮಿನಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿತ್ತು ಎಂದರು.

ಈ ಮೇಳದಲ್ಲಿ ವಿನ್ ಮ್ಯಾನ್ ಸಾಫ್ಟವೇರ್, ಪ್ರಕಾಶ್ ರೀಟೆಲ್ಸ್, ಎಚ್ ಡಿ ಎಫ್ ಸಿ ಬ್ಯಾಂಕ್, ಬೇಲ್ ಓ ಸೀಲ್,ಕಾಂಚನ್ ಹ್ಯೂಂಡೈ ಇನ್ನಿತರ ಕಂಪೆನಿಗಳು ಭಾಗವಹಿಸಿ, ನೂರಾರು ಅಭ್ಯರ್ಥಿಗಳ ಸಂದರ್ಶನ ನಡೆಸಿದರು.

ನಿರ್ದೇಶಕಿ ಶ್ರೀಮತಿ ಪೌರ್ಣಮಿ ಪ್ರೇಮ್ ಶೆಟ್ಟಿ, ಪರೀಕ್ಷಿತ್ ಹೆಗ್ಡೆ, ರಾಜೇಶ್, ರಿಫಾ, ಕಾರ್ತಿಕ್ ಉಪಸ್ಥಿತರಿದ್ದರು.