ಉಡುಪಿಯಲ್ಲಿ ಅ.6ರಂದು ‘ಉದ್ಯೋಗ ಮೇಳ”: ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಅವಕಾಶ

ಉಡುಪಿ: ಮಹಿಳಾ ಸಬಲೀಕರಣ ಹಾಗೂ ಹಿರಿಯ ನಾಗರಿಕರಿಗಾಗಿ ‘ಉದ್ಯೋಗ ಮೇಳ’ವನ್ನು ಅ.6ರಂದು ಉಡುಪಿಯಲ್ಲಿ ಆಯೋಜಿಸಲಾಗಿದೆ.

ಉಡುಪಿಯ ಹೋಟೆಲ್ ಕಿದಿಯೂರಿನ ಶೇಷಶಯನ ಬಾಲ್ಕನಿ ಹಾಲ್‌ನಲ್ಲಿ ಬೆಳಿಗ್ಗೆ 10.30ಕ್ಕೆ ಉದ್ಯೋಗ ಮೇಳ ನಡೆಯಲಿದೆ. ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ಉದ್ಯೋಗ ಮತ್ತು ಹೆಚ್ಚುವರಿ ಆದಾಯದ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಮೇಳದಲ್ಲಿ ಆರ್ಥಿಕ ಸ್ವಾವಲಂಬನೆ, ಆರೋಗ್ಯ ಸಹಾಯ, ಆತ್ಮವಿಶ್ವಾಸ ವೃದ್ಧಿ, ಸಕ್ರಿಯ ಹಾಗೂ ಸಂತಸದ ವೃದ್ಧಾಪ್ಯ, ಎರಡನೇ ಆದಾಯ, ಕುಟುಂಬ ವೈದ್ಯಕೀಯ ಸೌಲಭ್ಯ ಸೇರಿದಂತೆ ವಿವಿಧ ಅವಕಾಶಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಅಲ್ಲದೆ, ಪಿಂಚಣಿ ಆದಾಯ, ಹೊಂದಿಕೊಳ್ಳುವ ಕೆಲಸದ ಸಮಯ, ಅರೆಕಾಲಿಕ ಹಾಗೂ ಪೂರ್ಣಕಾಲಿಕ ಕೆಲಸದ ಅವಕಾಶಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ.
ನಿವೃತ್ತ ಬ್ಯಾಂಕ್ ಅಧಿಕಾರಿಗಳು, ಶಿಕ್ಷಕರು, ಉದ್ಯಮಿಗಳು, ಎನ್‌ಆರ್‌ಐಗಳು, ಗೃಹಿಣಿಯರು ಸೇರಿದಂತೆ ಅರ್ಹ ಹಿರಿಯ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ತಿಳಿಸಲಾಗಿದೆ.

ಕೆಲವು ಹುದ್ದೆಗಳಿಗೆ ₹75,000ರವರೆಗೆ ನಿಗದಿತ ವೇತನ, ಭತ್ಯೆ ಹಾಗೂ ₹6 ಲಕ್ಷದವರೆಗೆ ಜೀವ ವಿಮೆ ಸೇರಿದಂತೆ ವಿವಿಧ ಸೌಲಭ್ಯಗಳಿವೆ.

ಭಾಗವಹಿಸಲು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಹಾಗೂ 10ನೇ ತರಗತಿ ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆಯ ಅಂಕಪಟ್ಟಿ ತರಬೇಕು. ನೋಂದಣಿ ಅಗತ್ಯವಿದ್ದು, ಆಸಕ್ತರು 9606760757 ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು ಎಂದು ಆಯೋಜಕರು ತಿಳಿಸಿದ್ದಾರೆ.