ಕಾರ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ನ್ಯಾಶನಲ್ ಪಿ.ಯು ಕಾಲೇಜು ಬಾರ್ಕೂರು ಇದರ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಜಂಪ್ ರೋಪ್ ಟೂರ್ನಾಮೆಂಟ್ ನಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಐವರು ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
30 ಸೆಕೆಂಡ್ ಸ್ಪೀಡ್ ಡಬಲ್ ಅಂಡರ್ ಜಂಪ್ ರೋಪ್ನಲ್ಲಿ ವಿಶ್ವನಾಥ ಕೊಪ್ಪದ್ ಹಾಗೂ ಕು.ಚಿನ್ಮಯ್.ಎಸ್.ದೇಶಪಾಂಡೆ ಚಿನ್ನದ ಪದಕ, 3.ಮೀ.ಎಂಡೊರೆನ್ಸ್ ಜಂಪ್ ರೋಪ್ನಲ್ಲಿ ವಿಘ್ನೇಶ್ ಭಟ್ ಹಾಗೂ ಮಾನ್ಯ ಎಂ.ಎ ಚಿನ್ನದ ಪದಕ, 30 ಸೆಕೆಂಡ್ ಸ್ಪೀಡ್ ಜಂಪ್ ರೋಪ್ನಲ್ಲಿ ಹರ್ಷ ಕೊರವರ್ ಚಿನ್ನದ ಪದಕವನ್ನು ಪಡೆದಿದ್ದು ಮುಂದೆ ನಡೆಯುವ ರಾಜ್ಯಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಅಭಿನಂದಿಸಿ ಶುಭಹಾರೈಸಿದ್ದಾರೆ.