ಕಾರ್ಕಳ : ಕೊಪ್ಪಳದ ಶ್ರೀ ಕರಿಸಿದ್ದೇಶ್ವರ ಸಮುದಾಯ ಭವನದಲ್ಲಿ ಪದವಿ ಪೂರ್ವಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಜರುಗಿದ ರಾಜ್ಯಮಟ್ಟದ ಜಂಪ್‌ರೋಪ್ ಕ್ರೀಡಾಸ್ಪರ್ಧೆಯಲ್ಲಿ 30 ಸೆಕೆಂಡ್ ಸ್ಪೀಡ್ ಡಬಲ್ ಅಂಡರ್ ವಿಭಾಗದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕು.ಚಿನ್ಮಯಿ.ಎಸ್.ದೇಶ್‌ಪಾಂಡೆ ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
ಈಕೆ ಶ್ರೀನಿವಾಸ್ ದೇಶ್‌ಪಾಂಡೆ ಹಾಗೂ ಮನಸ್ವಿನಿ.ಎಸ್.ದೇಶಪಾಂಡೆ ದಂಪತಿಗಳ ಸುಪುತ್ರಿ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಸೌಜನ್ಯ ಹೆಗ್ಡೆಯವರು ಮಾರ್ಗದರ್ಶನ ಮಾಡಿದ್ದಾರೆ.
ಸಾಧಕ ವಿದ್ಯಾರ್ಥಿನಿಯನ್ನುಅಜೆಕಾರ್ ಪದ್ಮಗೋಪಾಲ್‌ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಅಭಿನಂದಿಸಿದ್ದು, ಪ್ರಾಂಶುಪಾಲ ದಿನೇಶ್.ಎಂ.ಕೊಡವೂರ್, ಉಪಪ್ರಾಂಶುಪಾಲೆ ಸಾಹಿತ್ಯ, ಪಿ.ಆರ್.ಒ ಜ್ಯೋತಿಪದ್ಮನಾಭ ಭಂಡಿ ಸಹಿತ ಜ್ಞಾನಸುಧಾ ಸಂಸ್ಥೆಯ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ ಹರ್ಷವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.