ದ್ವಿತೀಯ ಪಿಯು ಫಲಿತಾಂಶ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಉತ್ಕೃಷ್ಟ ಫಲಿತಾಂಶ ದಾಖಲಿಸಿದ ಜ್ಞಾನಸುಧಾ ಕಾಲೇಜು

ಕಾರ್ಕಳ: ಕುಕ್ಕುಂದೂರಿನ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ಚಿರಂತ್ ಕೆ ಹಾಗೂ ಪ್ರಜ್ಞಾ ವಿ ಅವರು 595 ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದು,ಕಾಮರ್ಸ್ ವಿಭಾಗದಿಂದ ಕುಮಾರಿ ಛಾಯಾ ಪೈ 594 ಅಂಕ ಗಳಿಸಿ ಉಡುಪಿ ಜಿಲ್ಲೆಗೆ ಮೊದಲ ಸ್ಥಾನಿಯಾಗಿ, ರಾಜ್ಯಕ್ಕೆ ತೃತೀಯ ಸ್ಥಾನ ಗಳಿಸಿದ್ದಾರೆ. ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 428 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.

10 ವಿದ್ಯಾರ್ಥಿಗಳು 590 ಕ್ಕಿಂತ ಅಧಿಕ ಅಂಕ ಗಳಿಸಿದ್ದು, 17 ವಿದ್ಯಾರ್ಥಿಗಳು ಶೇ.98 ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿರುತ್ತಾರೆ. 3  ವಿದ್ಯಾರ್ಥಿಗಳು ತಮ್ಮ 5 ಪತ್ರಿಕೆಯಲ್ಲಿ, 10  ವಿದ್ಯಾರ್ಥಿಗಳು ತಮ್ಮ 4 ಪತ್ರಿಕೆಯಲ್ಲಿ, 29  ವಿದ್ಯಾರ್ಥಿಗಳು ತಮ್ಮ 3 ಪತ್ರಿಕೆಯಲ್ಲಿ, 63 ವಿದ್ಯಾರ್ಥಿಗಳು ತಮ್ಮ 2 ಪತ್ರಿಕೆಯಲ್ಲಿ, 119 ವಿದ್ಯಾರ್ಥಿಗಳು 1 ಪತ್ರಿಕೆಯಲ್ಲಿ ಪೂರ್ಣಾಂಕವನ್ನು ಪಡೆದಿದ್ದು, ಸಂಸ್ಥೆಯಲ್ಲಿಒಟ್ಟು 389 ಪತ್ರಿಕೆಗಳು ಪೂರ್ಣಾಂಕಗಳಿಸಿದ್ದು, ಈ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಉತ್ಕೃಷ್ಟ ಫಲಿತಾಂಶ ದಾಖಲಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಿಜ್ಞಾನ ವಿಭಾಗದಲ್ಲಿ  ಚಿರಂತ್.ಕೆ (595), ಪ್ರಜ್ಞಾ.ವಿ (595), ಸ್ತುತಿ (593), ಉತ್ತಮ್ (592), ದಿಯಾ ಉದಯ್ ಶೆಟ್ಟಿ(592), ವೈಷ್ಣವಿ ಎನ್ (590), ಅಖಿಲ್ ವಾಗ್ಲೆ(590), ಸಾಯಿ ಗಣೇಶ್ (589), ಅಭಿಷೇಕ್ ಡಿ(589), ಶ್ರೀನಿಧಿ ಶೆಟ್ಟಿ (589), ಅನನ್ಯ ಬಿ.ಎ(589), ದೀಕ್ಷಾ ನಾಗರಾಜ್(588), ಬೈರಸಿದ್ದೇಶ್(588), ತೃಪ್ತಿ ಎಸ್ (587), ಪ್ರಜ್ವಲ್.ಪಿ.(587), ಆರ್ಯ ರಾಜೇಶ್ (587), ಸ್ನೇಹ ಪ್ರಭು(587), ಭರತ್.ಎಚ್(586) ಚಂದನ್.ಎಸ್.ಪಿ(586) ಯುವಾನ್(586) ಬಿ.ಆರ್.ಆಯುಶ್‌ ರೈ(586), ಆಸ್ತಾ(586), ಆಯುಷ್‌ ಗಾಂವಕರ್ (586), ನಮನ್‌ ಕಿರಣ್‌ರಾವ್(586), ಆಶಿಕ ಶೆಟ್ಟಿ (585), ನಾಗಶ್ರೀ ಪೈ(585), ಆರ್ಯನ್ ವಿದ್ಯಾಧರ್ ಶೆಟ್ಟಿ (585) ಚಿಂತನ್ ಪಿ(585), ರವಿ ದಾನನ್ನವರ್(585), ಸಾನ್ವಿ(585), ಆದರ್ಶ್ ಟಿ(585), ಇ.ವಿ.ಸ್ಕಂದಗೌಡ (585), ಎಚ್.ಎ.ಚಾರ್ವಿ(585), ರಾಕೇಶ್‌ ಎಚ್ ಜಿ(585) ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಶೇ.90 ಕ್ಕಿಂತ ಆಧಿಕ ಅಂಕ ಗಳಿಸಿದ ಜ್ಞಾನಸುಧಾ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು: ಛಾಯಾ.ಸಿ.ಪೈ (594), ರಶ್ಮಿತಾ ಶೆಟ್ಟಿ (592), ಸಾತ್ವಿಕ್ ಪ್ರಭು (591), ಸಾಕ್ಷಿಯು ಶೆಟ್ಟಿ (588), ಮಲ್ಲಿಕಾ ಪ್ರಶಾಂತ್ ಶೆಟ್ಟಿ (587), ಪ್ರಖ್ಯಾತಿ ಪ್ರಭು (586), ಶ್ರಜನಾ ಶೆಟ್ಟಿ (586), ಸಾನ್ವಿ (586), ಶ್ರೀಜಾ ಶೆಟ್ಟಿ (585), ಅಲೋಕ್.ಸಿ.ಎಸ್ (583), ಕ್ಷಿತಿ (583), ಐಶ್ವರ್ಯ (580), ಪ್ರತೀಕ್ಷಾ(580), ಶ್ರೀನಿಧಿ ಪೈ(580), ಹೆಗ್ಡೆ ಅಪೇಕ್ಷಾ (579), ಅದಿತಿ (579), ದಿವ್ಯ ಶೆಣೈ (576), ಆದಿತ್ಯ.ಡಿ.ಸಾಲ್ಯಾನ್( 575), ಅಬ್ದುಲ್‌ ಅನ್ವರ್ (574), ರಾಹುಲ್( 574), ಸಾಕ್ಷತ್ ಶೆಟ್ಟಿ (573), ಕೆ.ಅನನ್ಯ ಭಟ್(572), ಪ್ರತೀಕ್ಷಾ ಕಾಮತ್ (572), ಶ್ರೀನಿಧಿ ಭಟ್(568), ರಕ್ಷಾ ಶೆಟ್ಟಿ (564), ದೀಕ್ಷಿತಾ ಶೆಟ್ಟಿ(564), ಸುಮಿತ್‌ ಕರ್ಕೆರ (561), ಶೆಟ್ಟಿ ಪ್ರೀತೇಶ್ (558), ಲಿನ್ ಡಿಸಿಲ್ವಾ (554), ಪ್ರತೀಕ್ಷಾ ಶೆಣೈ (550), ಸಮರ್ಥ್.ಎಸ್(545) ಅಂಕ ಗಳಿಸಿದ್ದಾರೆ.