ಹತ್ತನೇ ತರಗತಿ ಫಲಿತಾಂಶ: ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳ ಸಾಧನೆ

ಕಾರ್ಕಳ: ಇಲ್ಲಿನ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶ್ರಾವ್ಯ ಮತ್ತು ತ್ರಿಶಾ ಎ ದೇವಾಡಿಗ 618 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಗಳಾಗಿದ್ದು, ಅನ್ವಿತಾ ನಾಯಕ್ 617 ಅಂಕದೊಂದಿಗೆ ದ್ವಿತೀಯ ಸ್ಥಾನ ಹಾಗೂ ಕೆ.ವಿಘೇಶ್ ಹಿಣಿ ಹಾಗೂ ಸ್ನಿಗ್ಧ ಯು ಶೆಟ್ಟಿ 613 ಅಂಕಗಳೊಂದಿಗೆ ತೃತೀಯ ಸ್ಥಾನಿಯಾಗಿದ್ದಾರೆ.

ಪರೀಕ್ಷೆಗೆ ಹಾಜರಾದ 99 ವಿದ್ಯಾರ್ಥಿಗಳಲ್ಲಿ 17 ವಿದ್ಯಾರ್ಥಿಗಳು 600 ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. 5 ವಿದ್ಯಾರ್ಥಿಗಳು ಶೇ. 98 ಕ್ಕಿಂತ ಅಧಿಕ ಅಂಕ ಪಡೆದಿದ್ದು, 58 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, 20 ವಿದ್ಯಾರ್ಥಿಗಳು ಶೇ. 95 ಕ್ಕಿಂತ ಅಧಿಕ ಅಂಕ ಹಾಗೂ 20 ವಿದ್ಯಾರ್ಥಿಗಳು ಶೇ.90 ಕ್ಕಿಂತ ಅಧಿಕ ಅಂಕಗಳಿಸಿ ತೇರ್ಗಡೆಯಾಗಿದ್ದಾರೆ.

ಉತ್ತಮ ಫಲಿತಾಂಶ ಗಳಿಸಿದ ವಿದ್ಯಾರ್ಥಿಗಳನ್ನು ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರು, ಪ್ರಾಂಶುಪಾಲರು ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.