ಕಾರ್ಕಳ: ಶ್ರೀ ಮಹಾಗಣಪತಿ ದೇವಸ್ಥಾನ, ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಹಾಗೂ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ದೇವಸ್ಥಾನವು ನವೀಕರಣಗೊಂಡ ಪ್ರಯುಕ್ತ ಹಾಗೂ ಇತ್ತೀಚೆಗೆ ಹುತಾತ್ಮರಾದ ವೀರಯೋಧರ ಸಂಸ್ಮರಣೆಯೊಂದಿಗೆ ಅಹೋರಾತ್ರಿ ಭಜನಾ ಸುಧಾವನ್ನು ಗುಜರಾತಿನ ಶಶಿ ಕೆಟರರ್ಸ್ ಮ್ಯಾನೆಜಿಂಗ್ ಡೈರಕ್ಟರ್ ಶ್ರೀ ಶಶಿಧರ್ ಶೆಟ್ಟಿ ದೀಪ ಪ್ರಜ್ವಲನಗೊಳಿಸಿ ಚಾಲನೆ ನೀಡಿದರು.
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ದೀಪವಿಸರ್ಜನೆ :
ಡಿಸೆಂಬರ್ 24ರ ಮುಂಜಾನೆ 7ಗಂಟೆಗೆ ಪ್ರಾರಂಭಗೊಂಡ ಭಜನಾಸುಧಾವು 25ರಬೆಳಗ್ಗೆ 7ಗಂಟೆಗೆ ಹುತಾತ್ಮರಾದ ವೀರಯೋಧರಿಗೆ ಪುಷ್ಪಾರ್ಚನೆಗೈದು, ದೀಪವಿಸರ್ಜನೆಯ ಮೂಲಕ ಭಜನಾಸುಧಾ ಕಾರ್ಯಕ್ರಮ ಸಮಾಪನಗೊಂಡಿತು.
ಈ ಸಂದರ್ಭ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಭಜನಾ ಕಾರ್ಯಕ್ರಮ ನೆರವೇರಲು ಸಹಕರಿಸಿದ ಎಲ್ಲರಿಗೂ ವಂದಿಸಿದರು.
ಅಹೋರಾತ್ರಿ ನಡೆದ ಭಜನಾ ಸುಧಾದಲ್ಲಿ ಸುಮಾರು 18 ಭಜನಾ ಮಂಡಳಿಗಳು ಪಾಲ್ಗೊಂಡಿದ್ದವು. ಕಾಯಕ್ರಮವು ಕಾರ್ಕಳ ಜ್ಞಾನಸುಧಾ ಯುಟ್ಯೂಬ್ ಚಾನಲ್ ಹಾಗೂ ನ್ಯೂಸ್ ಕಾರ್ಕಳ ಯುಟ್ಯೂಬ್ ಚಾನಲ್, ಪ್ರೈಮ್ ಕಾರ್ಲ ಕೇಬಲ್ ಟಿವಿಯ ಮೂಲಕ ನೇರ ಪ್ರಸಾರಗೊಂಡಿತು.
ಕಾರ್ಯಕ್ರಮದಲ್ಲಿ ಟ್ರಸ್ಟಿ ಶ್ರೀ ಕರುಣಾಕರ್ ಶೆಟ್ಟಿ, ಶ್ರೀ ಮಹಾಗಣಪತಿ ಭಜನಾ ಮಂಡಳಿ ಅಧ್ಯಕ್ಷ ಶ್ರೀ ಕಮಲಾಕ್ಷ ನಾಯಕ್, ಎಪಿಜಿಇಟಿ ಆಡಳಿತ ಮಂಡಳಿ ಸದಸ್ಯ ಶ್ರೀ ಅನಿಲ್ ಕುಮಾರ್ ಜೈನ್, ತ್ರಿವಳಿ ಸಂಸ್ಥೆಗಳ ಪ್ರಾಂಶುಪಾಲರುಗಳಾದ ಶ್ರೀ ದಿನೇಶ್ ಎಂ ಕೊಡವೂರ್, ಶ್ರೀ ಗಣೇಶ್ ಶೆಟ್ಟಿ, ಶ್ರೀಮತಿ ಉಷಾರಾವ್ ಯು, ಉಪಪ್ರಾಂಶುಪಾಲರುಗಳಾದ ಶ್ರೀ ಸಾಹಿತ್ಯ, ಶ್ರೀ ಸಂತೋಷ್, ಶ್ರೀಮತಿ ವಾಣಿ ಕೆ, ಪಿಆರ್‍ಒ ಶ್ರೀಮತಿ ಜ್ಯೋತಿ ಪದ್ಮನಾಭ ಭಂಡಿ, ಸಂಸ್ಥೆಯ ಹಿತೈಷಿಗಳಾದ ಶ್ರೀ ತ್ರಿವಿಕ್ರಮ ಕಿಣಿ, ಶ್ರೀ ದೇವೇಂದ್ರ ನಾಯಕ್ ಉಪಸ್ಥಿತರಿದ್ದರು. ಜ್ಞಾನಸುಧಾ ಪ್ರೌಢಶಾಲಾ ಹಾಗೂ ಪಿಯುವಿಭಾಗದ ಎನ್‍ಸಿಸಿ ಕೆಡೆಟ್‍ಗಳು ಹಾಗೂ ಪಿಯು ವಿಭಾಗದ ಎನ್.ಎಸ್.ಎಸ್ ವಿದ್ಯಾರ್ಥಿಗಳು ಸಹಕರಿಸಿದರು.