ಉಡುಪಿ: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ಶ್ರೀಕೃಷ್ಣ ಜಯಂತಿಯ ಪ್ರಯುಕ್ತ ಕೃಷ್ಣಮಠದಲ್ಲಿ ಆಯೋಜಿಸಿರುವ ಸೆ. 3ರಿಂದ 10ರ ವರೆಗೆ ಎಂಟು ದಿನಗಳ ಕಾಲ ಜ್ಞಾನಯಜ್ಞ ಕಾರ್ಯಕ್ರಮಕ್ಕೆ ಪರ್ಯಾಯ ಅದಮಾರು ಮಠದ ಹಿರಿಯ ವಿಶ್ವಪ್ರಿಯತೀರ್ಥ ಸ್ವಾಮೀಜಿ, ಪರ್ಯಾಯ ಈಶಪ್ರಿಯತೀರ್ಥ ಸ್ವಾಮೀಜಿ ಹಾಗೂ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಇಂದು ಚಾಲನೆ ನೀಡಿದರು.
ಪರ್ಯಾಯ ಈಶಪ್ರಿಯ ಶ್ರೀಗಳು ಮಾತನಾಡಿ, ಜಗತ್ತಿನಲ್ಲಿ ನಾವು ಏನನ್ನಾದರೂ ಪಡೆದರೂ ಅದಕ್ಕೆ ಭಗವಂತನ ಅನುಗ್ರಹ ಇರುತ್ತದೆ. ಇದು ಭಗವಂತನ ಪೂಜೆಯ ಫಲದಿಂದ ನಮಗೆ ಲಭಿಸುತ್ತದೆ ಎಂದರು.
ಪಲಿಮಾರು ಮಠದ ಕಿರಿಯ ರಾಜರಾಜೇಶ್ವರತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.