ಕಾರ್ಕಳ: ನಿಟ್ಟೆ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸುಮಾರು 21 ಸಾವಿರ ಸದಸ್ಯರಿದ್ದ ಹಳೆ ವಿದ್ಯಾರ್ಥಿ ಸಂಘದ 2023-24 ಸಾಲಿನ ನೂತನ ಅಧ್ಯಕ್ಷರಾಗಿ ಮೂಲ್ಕಿಯ ಜೀವನ್ ಕೆ. ಶೆಟ್ಟಿ ಆಯ್ಕೆಯಾಗಿದ್ದಾರೆ.
ನಿಟ್ಟೆ ಸಂಸ್ಥೆಯಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 1996 ರಲ್ಲಿ ನಿಟ್ಟೆ ಮಹಾವಿದ್ಯಾಲಯದಲ್ಲಿ ಬಿ.ಇ(ಸಿವಿಲ್ ಇಂಜಿನಿಯರಿಂಗ್) ಮತ್ತು 2015 ರಲ್ಲಿ ಎಂ.ಟೆಕ್ (ಕನ್ ಸ್ಟ್ರಕ್ಷನ್ ಟೆಕ್ನಾಲಜಿ)ನಲ್ಲಿ ಪದವಿ ಪಡೆದಿರುತ್ತಾರೆ.
ಸಂಸ್ಥೆಯ ಪ್ರಾಂಶುಪಾಲ ಡಾ. ನಿರಂಜನ್ ಚಿಪ್ಲೂಣ್ಕರ್, ನಿರ್ದೇಶಕ ಯೋಗೀಶ್ ಹೆಗ್ಡೆ, ಪ್ರಸನ್ನ ಕೈಲಾಜೆ, ಸಂಯೋಜಕ ಪ್ರೊ. ಜ್ಞಾನೇಶ್ವರ ಪೈ ಹಾಜರಿದ್ದರು.
ನಿಕಟಪೂರ್ವ ಅಧ್ಯಕ್ಷೆ ಪ್ರೊ. ಪ್ರಭಾ ನಿರಂಜನ್ ಅಧಿಕಾರ ಹಸ್ತಾಂತರಿಸಿದರು.
ಸಂಘದ ಉಪಾಧ್ಯಕ್ಷರಾಗಿ ಅವಿನಾಶ್ ಕೃಷ್ಣಕುಮಾರ್, ಕಾರ್ಯದರ್ಶಿಯಾಗಿ ರಂಜಿತ್ ಭಟ್, ಜತೆ ಕಾರ್ಯದರ್ಶಿಯಾಗಿ ಶರತ್ ಮತ್ತು ಖಂಜಾಂಜಿಯಾಗಿ ಡಾ. ಹರ್ಷಿತಾ ಜತ್ತಣ್ಣ ಆಯ್ಕೆಯಾಗಿದ್ದಾರೆ.