ಟೆನ್ನೀಸ್ ಆಡುವ ಮೂಲಕ ಗಮನ ಸೆಳೆದ ಸಚಿವೆ ಜಯಾಮಾಲ

ಉಡುಪಿ ಅಜ್ಜರಕಾಡಿನಲ್ಲಿ ಇಂದು ನಡೆದ ಸಿಂಥೆಟಿಕ್ ಟೆನಿಸ್ ಒಳಾಂಗಣ ಕ್ರೀಡಾಂಗಣದ  ಉದ್ಘಾಟನಾ ಸಮಾರಂಭದಲ್ಲಿ ಟೆನ್ನಿಸ್ ಆಡುವ ಮೂಲಕ ಗಮನ ಸೆಳೆದರು.
ಕ್ರೀಡಾಂಗಣ ವನ್ನು ಉದ್ಘಾಟಿಸಿದ ಕ್ರೀಡಾ ಸಚಿವ ರಹೀಂ ಖಾನ್ ಹಾಗೂ ಶಾಸಕ ರಘುಪತಿ ಭಟ್ ಟೆನ್ನಿಸ್ ಆಡಿದರು.
ನಂತರ ಅಂಕಣಕ್ಕೆ ಇಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ರಾಕೆಟ್ ಹಿಡಿದು ಆಡಲು ಆರಂಭಿಸಿದರು.
 ಸುಮಾರು10 ನಿಮಿಷಕಾಲ ಆಟವಾಡಿದ ಸಚಿವೆ ಕ್ರೀಡಾ ಸ್ಪೂರ್ತಿ ಮೆರೆದರು .
 ಬಳಿಕ ನೂತನ ಹವಾನಿಯಂತ್ರಿತ ಜಿಮ್ ಉದ್ಘಾಟನೆಗೊಳಿಸಿ ಕೆಲವು ಜಿಮ್ ಪರಿಕರಗಳಲ್ಲಿ ಕಸರತ್ತು ನಡೆಸಿ ಇಬ್ಬರು ಸಚಿವರು ಕೂಡ ಗಮನ ಸೆಳೆದರು.