ಕುಂದಾಪುರ: ಇಲ್ಲಿನ ಹೆಮ್ಮಾಡಿಯಲ್ಲಿರುವ ಜನತಾ ಸ್ವತಂತ್ರ ಪ.ಪೂ ಕಾಲೇಜಿನಲ್ಲಿ ಶ್ರೀ ವಿವಿವಿ ಮಂಡಳಿ ಹೆಮ್ಮಾಡಿ ಹಾಗೂ ಸಮರ್ಪಣ ಶೈಕ್ಷಣಿಕ ಟ್ರಸ್ಟ್ ಸಯೋಗದೊಂದಿಗೆ ಜನತಾ ಆವಿಷ್ಕಾರ್-2022 ಸ್ಪರ್ಧೆಯನ್ನು ಡಿ.14 ರಂದು ಬೆಳಗ್ಗೆ 9 ಆಯೋಜಿಸಲಾಗಿದ್ದು, ವ್ಯಾಪಾರ ಮಳಿಗೆ ವಿಜ್ಞಾನ ಮಾದರಿ ಮತ್ತು ಸಾಂಸ್ಕೃತಿಕ ಸಂಭ್ರಮ ವಿಭಾಗದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮರ್ಪಣ ಶೈಕ್ಷಣಿಕ ಟ್ರಸ್ಟ್ ನ ಅಧ್ಯಕ್ಷ ಗಣೇಶ್ ಮೊಗವೀರ್ ಇವರು ವಹಿಸಲಿದ್ದು, ಮುಖ್ಯ ಅತಿಥಿ ಮತ್ತು ಉದ್ಘಾಟಕರಾಗಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಭಾಗವಹಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಶ್ರೀ ವಿವಿವಿ ಮಂಡಳಿಯ ಅಧ್ಯಕ್ಷ ಗೋಪಾಲ್ ಪೂಜಾರಿ, ಜನತಾ ಮೀನು ಆಹಾರ ಮತ್ತು ಎಣ್ಣೆ ಉತ್ಪನ್ನಗಳ ಕಂಪನಿಯ ಎಂಡಿ ಆನಂದ್ ಸಿ ಕುಂದರ್, ಉಡುಪಿ ಜಿಲ್ಲಾ ಪ.ಪೂ ಶಿಕ್ಷಣ ಇಲಾಖೆಯ ಸಹಯಕ ನಿರ್ದೇಶಕ ಮಾರುತಿ, ಸ್ಯಾಪ್ ಬಿಸಿನೆಸ್ ಸೊಲ್ಯೂಶನ್ ಡಾಯ್ಟನ್ ಸಿಟಿ ಒಯಾಹೋದ ಉದಯ ಪೂಜಾರಿ, ಜನ್ನಾಡಿ ಫೇವರೆಟ್ ಕ್ಯಾಶ್ಯೂ ನ ಎಚ್. ಶಂಕರ್ ಹೆಗ್ಡೆ ಜನ್ನಾಡಿ ಉಪಸ್ಥಿತರಿರಲಿದ್ದಾರೆ.
ಗೌರವ ಅತಿಥಿಯಾಗಿ ಶೈಕ್ಷಣಿಕ ಮಾರ್ಗದರ್ಶಕಿ ಮತ್ತು ಸಲಹೆಗಾರ್ತಿ ಚಿತ್ರಾ ಕಾರಂತ್, ಹೆಮ್ಮಾಡಿ ಜನತಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಮಂಜು ಕಾಳಾವರ, ಉಪಪ್ರಾಂಶುಪಾಲ ರಮೇಶ್ ಪೂಜಾರಿ ಉಪಸ್ಥಿತರಿರಲಿದ್ದಾರೆ ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.