ಜ.4-5: ರಂಗಭೂಮಿ ಉಡುಪಿ ಆಶ್ರಯದಲ್ಲಿ ನಾಟಕೋತ್ಸವ-ಪ್ರಶಸ್ತಿ ಪ್ರದಾನ

ಉಡುಪಿ: ರಂಗಭೂಮಿ ಉಡುಪಿ ಸಂಸ್ಥೆಯ ಆಶ್ರಯದಲ್ಲಿ ನಾಟಕೋತ್ಸವ, ರಂಗಭೂಮಿ ಪ್ರಶಸ್ತಿ ಪ್ರದಾನ, ಕಲಾಂಜಲಿ ಸ್ಮರಣಸಂಚಿಕೆ ಬಿಡುಗಡೆ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಜ. 4 ಮತ್ತು 5ರಂದು ನಗರದ ಎಂಜಿಎಂ ಕಾಲೇಜು ನೂತನ ರವೀಂದ್ರ ಮಂಟದಲ್ಲಿ ನಡೆಯಲಿದೆ ಎಂದು
ಸಂಸ್ಥೆಯ ಅಧ್ಯಕ್ಷ  ಡಾ. ತಲ್ಲೂರು ಶಿವರಾಮ ಶೆಟ್ಟಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜ. 4ರಂದು ಸಂಜೆ 5.45ಕ್ಕೆ ಮುದ್ದಣ ಮಂಟಪದಲ್ಲಿ ರಂಗಕರ್ಮಿ, ನಟ ಮಂಡ್ಯ ರಮೇಶ್‌ ಅವರಿಗೆ ರಂಗ ಕಣ್ಮಣಿ ಬಿರುದಿನೊಂದಿಗೆ ರಂಗಭೂಮಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬಳಿಕ ಪರಿವರ್ತನ ಮೈಸೂರು ತಂಡದಿಂದ ‘ಬೆಟ್ಟದ ಜೀವ’ ನಾಟಕ ಪ್ರದರ್ಶನಗೊಳ್ಳಲಿದೆ. ಇದಕ್ಕೂ ಮೊದಲು ಮಧ್ಯಾಹ್ನ 3.45ರಿಂದ ರವೀಂದ್ರ ಮಂಟದಲ್ಲಿ ಮಂಡ್ಯ ರಮೇಶ್‌ ಕುರಿತ ವಿಚಾರ ಸಂಕಿರಣ ನಡೆಯಲಿದೆ ಎಂದರು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬನ್ನಂಜೆ ಗೋವಿಂದಾಚಾರ್ಯ, ಸಚಿವ ಕೋಟ
ಶ್ರೀನಿವಾಸ ಪೂಜಾರಿ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ. ವಿಜಯ
ಉಪಸ್ಥಿತರಿರುವರು. ಜ. 5ರಂದು ಸಂಜೆ 5.30ರಿಂದ 40ನೇ ರಾಜ್ಯಮಟ್ಟದ ನಾಟಕೋತ್ಸವ ಸ್ಪರ್ಧೆಯ ಬಹುಮಾನ ವಿತರಣೆ, ರಂಗಭೂಮಿ ಸ್ಮರಣಸಂಚಿಕೆ ಕಲಾಂಜಲಿ ಬಿಡುಗಡೆ ಕಾರ್ಯಕ್ರಮ
ನಡೆಯಲಿದೆ.
ಶಾಸಕ ರಘುಪತಿ ಭಟ್‌, ನಾಟಕ ಅಕಾಡೆಮಿ ಅಧ್ಯಕ್ಷ ಆರ್‌. ಭೀಮಸೇನ್‌ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಬಳಿಕ ಪ್ರಥಮ ಪ್ರಶಸ್ತಿ ವಿಜೇತ ಸಮಸ್ಟಿ ಬೆಂಗಳೂರು ತಂಡದಿಂದ ‘ನೀರು ಕುಡಿಸಿದ ನೀರೆಯರು’ ಪ್ರದರ್ಶನಗೊಳ್ಳಲಿದೆ
ಎಂದರು.
ರಂಗಭೂಮಿ ಉಪಾಧ್ಯಕ್ಷ ಎಂ. ನಂದಕುಮಾರ್‌, ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ, ಜಂಟಿ ಕಾರ್ಯದರ್ಶಿಗಳಾದ ಎಚ್‌.ಪಿ. ರವಿರಾಜ್‌, ಭಾಸ್ಕರ್‌ ರಾವ್‌ ಕಿದಿಯೂರು, ಸದಸ್ಯ ಮೇಟಿ ಮುದಿಯಪ್ಪ ಇದ್ದರು.