ಬೆಂಗಳೂರು: ಕೊನೆಗೂ ಶಾಲಾರಂಭದ ದಿನನಿಗಧಿಯಾಗಿದ್ದು ಶಾಲೆಗಳನ್ನು ಆರಂಭಿಸುವ ದಿನವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಶನಿವಾರ ಪ್ರಕಟಿಸಿದ್ದಾರೆ.
‘2021ರ ಜನವರಿ 1ನೇ ತಾರೀಕಿನಿಂದ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿ ಹಾಗೂ ಜ. 6 ರಿಂದ 9ನೇ ತರಗತಿಗೆ ವಿದ್ಯಾಗಮ ಪ್ರಾರಂಭ. ಹದಿನೈದು ದಿನಗಳ ಕಾಲ ಪರಿಸ್ಥಿತಿ ಅವಲೋಕಿಸಿ ಇತರ ತರಗತಿ ಪ್ರಾರಂಭಿಸುವ ಕುರಿತು ನಿರ್ಧಾರ ಪ್ರಕಟಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯ ಸಭೆಯಲ್ಲಿ ತೀರ್ಮಾನಿಸಲಾಗಿದೆ, ಎಂದು ಹೇಳಿದೆ. ಈ ಕುರಿತು ಸಿಎಂ ಕಚೇರಿಯ ಟ್ವೀಟ್ ತಿಳಿಸಿದೆ.