ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ವತಿಯಿಂದ ಅರ್ಥಿಕವಾಗಿ ತೀರ ಹಿಂದುಳಿದ ಎರಡು ಕುಟುಂಬಗಳಿಗೆ ಮನೆ ಹಸ್ತಾಂತರ

ಹೂಡೆ: ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ವತಿಯಿಂದ ಸೂರಿಲ್ಲದವರಿಗೆ ಸೂರು ಒದಗಿಸುವ ಕಾರ್ಯಕ್ರಮದಡಿಯಲ್ಲಿ ದಾನಿಗಳ ಸಹಾಯದಿಂದ ಅರ್ಥಿಕವಾಗಿ ಹಿಂದುಳಿದ ಎರಡು ಕುಟುಂಬಗಳಿಗೆ ಮನೆ ಹಸ್ತಾಂತರ ಮಾಡಲಾಯಿತು.

ಮನೆ ಮಾಲೀಕರಾದ ಅನ್ವರ್ ಸಾದೀಕ್ ಮತ್ತು ದೇವದಾಸ್ ಖಾರ್ವಿ ಅವರಿಗೆ ಮನೆಯ ಕೀಲಿಕೈ ನೀಡುವ ಮೂಲಕ ಮನೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಘಟಕದ ಅಧ್ಯಕ್ಷ ನಿಸಾರ್ ಉಪ್ಪಿನಕೋಟೆ ಅವರು ಅನ್ವರ್ ಸಾದೀಕ್ ಅವರಿಗೆ ಕೀಲಿಕೈ ಕೊಟ್ಟು ಶುಭ ಹಾರೈಸಿದರು. ದೇವದಾಸ ಖಾರ್ವಿಯವರಿಗೆ ಪ್ರೊ‌. ಅಬ್ದುಲ್ ಅಝೀಜ್ ಕೀಲಿಗೈ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಘಟಕದ ಅಧ್ಯಕ್ಷ ಅಬ್ದುಲ್ ಕಾದೀರ್ ಮೊಯ್ದಿನ್, ತೋನ್ಸೆ ಪಂಚಾಯತ್ ಅಧ್ಯಕ್ಷೆ ಲತಾ, ಗ್ರಾ.ಪಂ ಸದಸ್ಯರಾದ ಇದ್ರಿಸ್ ಹೂಡೆ, ಅರುಣಾ ಫರ್ನಾಂಡೀಸ್, ಯಶೋದಾ ಡಾ. ಫಹೀಮ್, ಜಮೀಲಾ, ಮಮ್ತಾಝ್, ಕುಸುಮಾ, ವಿಜಯ್, ಮಾಜಿ ಪಂಚಾಯತ್ ಅಧ್ಯಕ್ಷೆ ಫೌಝಿಯಾ ಸಾದೀಕ್, ಮಾಜಿ ಪಂಚಾಯತ್ ಸದಸ್ಯರಾದ ಉಸ್ತಾದ್ ಸಾದೀಕ್ ಮುಂತಾದವರು ಉಪಸ್ಥಿತರಿದ್ದರು.