ಉಡುಪಿ: ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಕೋಟ ಹೋಬಳಿ ವ್ಯಾಪ್ತಿಯ ಶಿರಿಯಾರ ಗ್ರಾಮದ ಕಲ್ಮರ್ಗಿ ಜೈ ಗಣೇಶ್ ಸೊಸೈಟಿ ಕಳೆದ 2007 ರಿಂದ ಸಹಕಾರಿ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಹಾಗೂ ಜನಪರ ಸೇವೆಯಲ್ಲಿ ನಿರತವಾಗಿದೆ. ಇದೀಗ ಸರಕಾರದ ಯಾವುದೇ ಅನುದಾಯ ಪಡೆಯದೆ ಸುಮಾರು 2 ಕೋಟಿ ವೆಚ್ಚದಲ್ಲಿ ಶಿರಿಯಾರ ಜೈ ಗಣೇಶ ಸೊಸೈಟಿ ಸ್ವಂತ ಕಟ್ಟಡ “ಸೌಹಾರ್ದ ಸಿರಿ” ಲೋಕಾರ್ಪಣೆಯ ಜುಲೈ 13 ಭಾನುವಾರದಂದು ರಾಜ್ಯ ಹೆದ್ದಾರಿ ಸಾಹೇಬರ ಕಟ್ಟೆ -ಶಿರಿಯಾರದಲ್ಲಿ ಜರುಗಲಿರುವುದು.
ಈ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸಾಮಾಜಿಕ ಕಾರ್ಯಕರ್ತ, ಸ್ಥಾಪಕ ಅಧ್ಯಕ್ಷ, ಹಾಲಿ ನಿರ್ದೇಶಕ, ನ್ಯಾಯವಾದಿ ಮತ್ತು ನೋಟರಿ ಶಿರಿಯಾರ ಕಲ್ಮರ್ಗಿ ಪ್ರಭಾಕರ ನಾಯಕ್ ರವರು ಸಹಕಾರಿ ಬಂಧು-ಮಿತ್ರರನ್ನು ಆಹ್ವಾನಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












