ಕಾಪು: ಇಂದಿನಿಂದ (ಜುಲೈ 25) ಹಲಸು ಮೇಳ

ಕಾಪು: ಸಂಸ್ಕೃತಿ ಈವೆಂಟ್ಸ್ ಪ್ರಸ್ತುತಿಯ ಅನಿಲ್ ಕುಮಾರ್ ಕಾಪು ಅವರ ನೇತೃತ್ವದಲ್ಲಿ ಹಲಸು ಮೇಳವು ಜುಲೈ 25, 26 ಮತ್ತು 27ರಂದು ಕಾಪು ಹಳೆ ಮಾರಿಯಮ್ಮ ಸಭಾಗೃಹದಲ್ಲಿ ನಡೆಯಲಿದೆ. ಹಲಸು, ಮಾವು ಮತ್ತು ಇತರ ಹಣ್ಣು, ಆಹಾರ, ಕೃಷಿ ಕೌಶಲಗಳ ಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ.