Home Trending ಐವಾನ್ ಡಿಸೋಜಾಗೆ ಕೊರೋನಾ ಪಾಸಿಟಿವ್: ಕಾಂಗ್ರೆಸ್ ಮುಖಂಡರಲ್ಲಿ ಆತಂಕ

ಐವಾನ್ ಡಿಸೋಜಾಗೆ ಕೊರೋನಾ ಪಾಸಿಟಿವ್: ಕಾಂಗ್ರೆಸ್ ಮುಖಂಡರಲ್ಲಿ ಆತಂಕ

ಮಂಗಳೂರು: ಮಾಜಿ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಅವರಿಗೆ ಸ್ವಾಬ್ ಟೆಸ್ಟ್ ವೇಳೆ ಕೊರೋನಾ ಸೋಂಕು ಪತ್ತೆಯಾಗಿದೆ.

ಐವಾನ್ ಡಿಸೋಜಾ ಪತ್ನಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಪತ್ನಿ ಖಾಸಗಿ ಆಸ್ಪತ್ರೆಯ‌ ವೈದ್ಯೆ ಯಾಗಿದ್ದಾರೆ.
ಐವಾನ್ ನಿನ್ನೆ ಡಿ.ಕೆ. ಶಿವಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಸುದ್ದಿಗೋಷ್ಠಿ ವೇಳೆಯೂ ಡಿಕೆಶಿ ಜೊತೆಯಲ್ಲಿದ್ದರು.
ಸದ್ಯ ಐವಾನ್ ಜೊತೆಗಿದ್ದ ಕಾಂಗ್ರೆಸ್ ನಾಯಕರಿಗೆ ಕ್ವಾರೆಂಟೈನ್ ಟೆನ್ಷನ್ ಶುರುವಾಗಿದೆ. KPCC ಅಧ್ಯಕ್ಷ ಡಿಕೆಶಿ, ಮಾಜಿ ಸಚಿವ ಯು.ಟಿ.ಖಾದರ್, ರಮಾನಾಥ್ ರೈ ಸೇರಿದಂತೆ ಹಲವು ಮುಖಂಡರಿಗೆ ಆತಂಕ ಎದುರಾಗಿದೆ.

error: Content is protected !!