ದ್ವಿತೀಯ ಇನ್ನಿಂಗ್ಸ್​ಗೆ ಮತ್ತೆ ಮಳೆ ಕಾಟ

ಕೊಲಂಬೊ (ಶ್ರೀಲಂಕಾ): ಇಂಡೋ – ಪಾಕ್​ ರೋಚಕ ಕದನಕ್ಕೆ ಮತ್ತೆ ಮಳೆ ಅಡ್ಡಿ ಆಗಿದೆ. ಮೀಸಲು ದಿನದ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್​ ಆಡಿದ್ದು, 357 ರನ್​​ಗಳ ಬೃಹತ್​ ಗುರಿಯನ್ನು ನೀಡಿದೆ.
ಈ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ 11ನೇ ಓವರ್​ಗೆ 2 ವಿಕೆಟ್​ ಕಳೆದುಕೊಂಡು 44 ರನ್​ ಗಳಿಸಿದೆ. ಪಾಕಿಸ್ತಾನದ ಆರಂಭಿಕ ಬ್ಯಾಟರ್​ ಇಮಾಮ್​ ಉಲ್​ ಹಕ್​ 9 ರನ್​ಗೆ ಮತ್ತು ತಂಡದ ನಾಯಕ ಬಾಬರ್​ ಅಜಮ್​ 10 ರನ್​ಗೆ ವಿಕೆಟ್​ ಒಪ್ಪಿಸಿದ್ದಾರೆ.
ಭಾರತ ಪಾಕಿಸ್ತಾನ ಪಂದ್ಯಕ್ಕೆ ಏಕೋ ಮಳೆ ಕಾಟ ತಪ್ಪಿದ್ದಲ್ಲ ಎಂಬಂತಾಗಿದೆ. ಎರಡನೇ ಇನ್ನಿಂಗ್ಸ್​ ಆರಂಭಿಸಿ 11 ಓವರ್ ಆಗುತ್ತಿದ್ದಂತೆ ಮತ್ತೆ ಮಳೆ ಬಂದು ಪಂದ್ಯ ನಿಂತಿದೆ. ​