ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಪ್ರಸಿದ್ಧಿ ಪಡೆದಿರುವ ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಪಾಲುದಾರ ಸಂಸ್ಥೆಯಾದ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯು ಕಳೆದ 3 ವರ್ಷಗಳಲ್ಲಿ 3000ಕ್ಕೂ ಅಧಿಕ ಅಭ್ಯರ್ಥಿಗಳಿಗೆ ಉದ್ಯೋಗವಕಾಶವನ್ನು ಸೃಷ್ಟಿಸಿರುತ್ತದೆ. ಇದೀಗ ಸಂಸ್ಥೆಯು ಖಚಿತ ಉದ್ಯೋಗಾವಕಾಶ ಹೊಂದಿರುವ ಐಟಿ ಕ್ಷೇತ್ರದ ಬಹುಬೇಡಿಕೆಯ ತಂತ್ರಜ್ಞಾನಗಳಾದ ಫ್ರಂಟ್ ಎಂಡ್ ಡೆವಲಂಪ್ಮೆಂಟ್, ಬ್ಯಾಕ್ ಎಂಡ್ ಡೆವಲಂಪ್ಮೆಂಟ್, ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಫುಲ್ ಸ್ಟ್ಯಾಕ್ ಡೆವಲಪರ್ ಕೋರ್ಸ್ ಗಳನ್ನು ನೀಡುತ್ತಿದೆ. ಪಿಯುಸಿ, ಪದವಿ, ಡಿಪ್ಲೊಮಾ, ಇಂಜಿನೀಯರಿಂಗ್ ವಿದ್ಯಾರ್ಥಿಗಳು ಈ ಕೋರ್ಸ್ ಗಳಿಗೆ ಪ್ರವೇಶಾತಿ ಪಡೆಯಬಹುದು.
ಸದರಿ ತರಬೇತಿಯನ್ನು ಆಯಾ ಕ್ಷೇತ್ರದ ನುರಿತ ತರಬೇತುದಾರರು ಪ್ರಾಯೋಗಿಕವಾಗಿ ನೀಡಲಿದ್ದು, 2 ತಿಂಗಳ ಲ್ಯಾಬ್ ತರಬೇತಿ ಹಾಗೂ 1.5 ತಿಂಗಳ ಇಂಟರ್ನ್ಷಿಪ್ ಮೂಲಕ ಲೈವ್ ಪ್ರಾಜೆಕ್ಟ್ ಗಳನ್ನು ಮುಗಿಸಲಾಗುತ್ತದೆ. ಈ ತಂತ್ರಜ್ಞಾನಗಳ ತರಬೇತಿಯೊಂದಿಗೆ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಸಂವಹನ ಕಲೆ, ಸಂದರ್ಶನ ಕಲೆಗಳಾದ ಆಪ್ಟಿಟ್ಯೂಡ್ – ಲಾಜಿಕಲ್ ತರಬೇತಿಯೂ ಒಳಗೊಂಡಿರುತ್ತವೆ. ಈ ತರಬೇತಿಗಳು ಕ್ಲಾಸ್ ರೂಮ್ ಹಾಗೂ ಆನ್ ಲೈನ್ ಮೂಲಕ ಪಡೆಯಲು ಅವಕಾಶವಿದೆ. ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯು ತನ್ನ ನೇಮಕಾತಿ ಪಾಲುದಾರ ಸಂಸ್ಥೆಗಳಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಕಲ್ಪಿಸಲಿದೆ. ಇದೀಗ ಸಂಸ್ಥೆಯ ಮುಂದಿನ ಬ್ಯಾಚ್ ಅಕ್ಟೋಬರ್ ಮೊದಲ ವಾರದಲ್ಲಿ ಪ್ರಾರಂಭವಾಗಲಿದ್ದು, ಆಸಕ್ತ ವಿದ್ಯಾರ್ಥಿಗಳು ಕಚೇರಿಯನ್ನು ಸಂಪರ್ಕಿಸಿ ನೋಂದಣಿ ಮಾಡಲು ಅವಕಾಶವಿದೆ ಹಾಗೂ ಹೆಚ್ಚಿನ ವಿವರಗಳಿಗೆ www.unnathi.careers ಗೆ ಅಥವಾ ಉಡುಪಿಯ ಪಿಪಿಸಿ 1ನೇ ಅಡ್ಡ ರಸ್ತೆಯಲ್ಲಿರುವ ಸಂಸ್ಥೆಯ ಕಚೇರಿಗೆ ಭೇಟಿ ನೀಡಬಹುದು.