ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿನ ವಿಕಲಚೇತನರು ಸರ್ಕಾರಿ ಮತ್ತು ಸರ್ಕಾರೇತರ ಸೌಲಭ್ಯ ಪಡೆಯಲು, ವಿಶೇಷ ಗುರುತು ಚೀಟಿ ವಿತರಿಸುವ ಕಾರ್ಯಕ್ರಮದ ಉದ್ಘಾಟನೆಯನ್ನು ಸೋಮವಾರ ನಗರಸಭಾ ಕಚೇರಿಯಲ್ಲಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ನೆರವೇರಿಸಿದರು.
ಏ.20 ಮತ್ತು 21 ರಂದು ಬಡಗುಬೆಟ್ಟು ಉಪಕಚೇರಿ, ಏ.22 ಮತ್ತು 25 ರಂದು ಮಣಿಪಾಲ ಉಪಕಚೇರಿ, ಏ.26 ಮತ್ತು 27 ರಂದು ಹೆರ್ಗಾ ಉಪ ಕಚೇರಿ, ಏ.28 ಮತ್ತು 29 ರಂದು ಮಲ್ಪೆ ಉಪಕಚೇರಿ ಹಾಗೂ ಏ. 30 ಮತ್ತು ಮೇ. 2 ರಂದು ಪುತ್ತೂರು ಉಪ ಕಚೇರಿಯಲ್ಲಿ ವಿಶೇಷ ಗುರುತು ಚೀಟಿ ನೋಂದಾವಣಾ ಶಿಬಿರ ನಡೆಯಲಿದ್ದು, ವಿಕಲಚೇತನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಸಾಲ್ಯಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಡಿ. ಬಾಲಕೃಷ್ಣ ಶೆಟ್ಟಿ, ವಿಕಲಚೇತನರ ಸಬಲೀಕರಣ ಇಲಾಖೆಯ ತಾಲೂಕು ಸಂಯೋಜನಾಧಿಕಾರಿ ಮಧುಸೂದನ ಹಾಗೂ ನಗರಸಭೆಯ ಸದಸ್ಯರುಗಳು ಉಪಸ್ಥಿತರಿದ್ದರು.