ಚಂದ್ರಯಾನ-3 ಲ್ಯಾಂಡಿಂಗ್ ಕಾರ್ಯಕ್ರಮ ನೇರ ಪ್ರಸಾರಕ್ಕಾಗಿ ಮಾಧ್ಯಮಗಳಿಗೆ ಆಹ್ವಾನವಿತ್ತ ISRO

ಬೆಂಗಳೂರು: ಚಂದ್ರಯಾನ -3 ಪ್ರಪಂಚದಾದ್ಯಂತ ವಿಶೇಷ ಕುತೂಹಲವನ್ನು ಹುಟ್ಟುಹಾಕಿದ್ದು, 140 ಕೋಟಿ ಭಾರತೀಯರು ಆ.23 ರಂದು ಚಂದ್ರನ ಅಂಗಳವನ್ನು ಮೊದಲ ಬಾರಿಗೆ ನೋಡುವ ತವಕದಲ್ಲಿದ್ದಾರೆ. ದೇಶದ ಮಾಧ್ಯಮಗಳೂ ಚಂದ್ರಯಾನ-3 ರ ಕ್ಷಣ ಕ್ಷಣದ ಮಾಹಿತಿಯನ್ನು ನೀಡುತ್ತಿವೆ. ಈ ಬಗ್ಗೆ ಇಸ್ರೋ ಟ್ವೀಟ್ ಮಾಡಿದ್ದು, ಮಾಧ್ಯಮಗಳಿಗೆ ಚಂದ್ರಯಾನ-3 ಲ್ಯಾಂಡಿಗ್ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡುವ ಆಹ್ವಾನ ನೀಡಿದೆ.

“ದೇಶಾದ್ಯಂತ ಮಾಧ್ಯಮಗಳು ತೋರಿಸಿದ ಆಸಕ್ತಿಯ ಆಧಾರದ ಮೇಲೆ ಚಂದ್ರಯಾನ-3 ಲ್ಯಾಂಡಿಂಗ್ ಕಾರ್ಯಕ್ರಮವನ್ನು ಉಪಗ್ರಹ ನಿಯಂತ್ರಣ ಕೇಂದ್ರ (SCC) ಕಟ್ಟಡ, ISRO ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ISTRAC), I ಕ್ರಾಸ್, I ಹಂತ ಪೀಣ್ಯ ಇಂಡಸ್ಟ್ರಿಯಲ್ ಎಸ್ಟೇಟ್, ಬೆಂಗಳೂರು ಇಲ್ಲಿಂದ ನೇರ ಪ್ರಸಾರ ಮಾಡಲು ಮಾನ್ಯತೆ ಪಡೆದ ಮಾಧ್ಯಮ ವ್ಯಕ್ತಿಗಳನ್ನು ISRO ಆಹ್ವಾನಿಸುತ್ತದೆ” ಎಂದು ಇಸ್ರೋ ಟ್ವೀಟ್ ಮಾಡಿದೆ.

ಚಂದ್ರಯಾನ-3 ಲ್ಯಾಂಡಿಂಗ್ ಈವೆಂಟ್‌ಗಾಗಿ ಮಾಧ್ಯಮದ ನೋಂದಣಿಗಾಗಿ ಲಿಂಕ್: https://docs.google.com/forms/d/e/1FAIpQLSeo8orgmVgT6rJSSVyeSJeg3NiavFcf2667M18VFMAn7EhWYQ/viewform (ಷರತ್ತುಗಳು ಅನ್ವಯ) ಎಂದು ಇಸ್ರೋ ತಿಳಿಸಿದೆ.