ಸಂಧಾನ ವಿಫಲವಾದ ಬೆನ್ನಲ್ಲೇ ಇರಾನ್ ವಿರುದ್ಧ ಇಸ್ರೇಲ್ ಭೀಕರ ದಾಳಿ.!

ಅಮೆರಿಕದೊಂದಿಗಿನ ಸಂಧಾನ ವಿಫಲವಾದ ಬೆನ್ನಲ್ಲೇ ಇರಾನ್ ವಿರುದ್ಧ ಇಸ್ರೇಲ್ ದಿಢೀರ್ ಸೇನಾ ಕಾರ್ಯಾಚರಣೆ ಶುರು ಮಾಡಿದೆ. ಇರಾನ್‌ಗೆ ಈ ವಿಚಾರವಾಗಿ ಈಗಾಗಲೇ ಹಲವು ಬಾರಿ ಅಮೆರಿಕ ಮತ್ತು ಇಸ್ರೇಲ್ ಎಚ್ಚರಿಕೆ ನೀಡಿದ್ದವು. ಆದರೂ ಇರಾನ್ ಮಣಿಯದೇ, ಸಂಧಾನಕ್ಕೂ ಒಪ್ಪದೇ ಹಿಂದೆ ಸರಿದಿತ್ತು.

ಈಗಾಗಲೇ ಅಮೆರಿಕಾದ ಬಲಿಷ್ಟ ಸೇನೆ ಇರಾನ್‌ ಗಡಿಯಲ್ಲಿತ್ತು. ಇದೇ ವೇಳೆ ಇಸ್ರೇಲ್‌ ಅಧಿಕೃತವಾಗಿ ಯುದ್ಧ ಸಾರಿದೆ. ಬೃಹತ್‌ ಕ್ಷಿಪಣಿಗಳು ಇರಾನ್‌ ವಾಯು ಗಡಿಯ ಮೇಲೆ ದಾಳಿ ನಡೆಸಿವೆ.

ಇರಾನ್‌ ತಕ್ಷಣ ಪರಮಾಣು ಒಪ್ಪಂದಕ್ಕೆ ಒಪ್ಪಿಕೊಳ್ಳದಿದ್ದರೇ 2025ರ ಜೂನ್ ದಾಳಿಗಿಂತ ಘೋರ ಯುದ್ಧ ನಡೆಯುವುದು ಎಂದು ಅಮೇರಿಕ ಎಚ್ಚರಿಸಿತ್ತು. ಈ ಬೆಳವಣಿಗೆಯ ಬಳಿಕ ಟ್ರಂಪ್‌ ಬಲಿಷ್ಟವಾಗಿರುವ ನೌಕಾಪಡೆಯ ಚಿತ್ತವೆಲ್ಲ ಇರಾನ್‌ ಕಡೆ ಎಂದು ವಾರ್ನಿಂಗ್‌ ನೀಡಿದ್ದರು. ಮಾತುಕತೆ ಮತ್ತು ಸಂಧಾನದ ಮೂಲಕ ಎಲ್ಲವೂ ಸರಿಹೋಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಮಧ್ಯಪ್ರಾಚ್ಯದ ಜನರಿಗೆ ಈಗ ದಿಢೀರ್‌ ಯುದ್ಧದ ಭೀತಿ ಶುರುವಾಗಿದೆ. ಎರಡೂ ದೇಶಗಳ ನಡುವೆ ನಡೆದ ಶಾಂತಿ ಮಾತುಕತೆಯ ವಿಫಲತೆಯಿಂದ ಹಿಂದೆ-ಮುಂದೆ ಯೋಚಿಸದೇ ಇಸ್ರೇಲ್‌ ಇರಾನ್‌ ಮೇಲೆ ದಾಳಿಸಿದೆ. ಮತ್ತೊಂದೆಡೆ ಇರಾನ್‌ ಕೂಡ ಮರುದಾಳಿ ಶುರುಮಾಡಿದ್ದು, ಮೂರನೇ ಮಹಾಯುದ್ಧದ ಭೀತಿಯೂ ಶುರುವಾಗಿ, ಎಲ್ಲೆಡೆಯೂ ಆತಂಕ ಸೃಷ್ಟಿಯಾಗಿದೆ.

ಇರಾನ್‌ನ ರಾಜಧಾನಿ ತೆಹ್ರಾನ್‌ನಲ್ಲಿ ಏಕಾಏಕಿ ದೊಡ್ಡ ಮಟ್ಟದ ಸ್ಟೋಟದ ಸದ್ದು ಕೇಳಿಬಂದು, ಜನರು ಕಕ್ಕಾಬಿಕ್ಕಿಯಾಗಿ ಓಟಕಿತ್ತಿದ್ದಾರೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಮತ್ತೆ ಸೇನಾ ಉದ್ವಿಗ್ನತೆ ಹೆಚ್ಚಾಗಿ ಯುದ್ಧ ಶುರುವಾಗಿದೆ. ಈ ದಾಳಿ ಬರೀ ಮುನ್ನೆಚ್ಚರಿಕೆ ಕ್ರಮ ಎಂದು ಇಸ್ರೇಲ್‌ ಹೇಳಿಕೊಂಡಿದೆ. ಒಟ್ಟಿನಲ್ಲಿ ಮಾತುಕತೆ ಮೂಲಕ ಸಮಸ್ಯೆ ಪರಿಹಾರವಾಗುವ ನಿರೀಕ್ಷೆ ಈಗ ಹುಸಿಯಾಗಿದೆ. ಇದರೊಂದಿಗೆ ಭದ್ರತೆಗೆ ಧಕ್ಕೆ ಮಾಡುವ ಅಪಾಯ ನಿವಾರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಸ್ರೇಲ್‌ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಸೇನಾ ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಇರಾನ್ ರಾಜಧಾನಿ ತೆಹ್ರಾನ್ ನಗರದಲ್ಲಿ ದಿಢೀರ್ ದೊಡ್ಡ ಮಟ್ಟದ ಸ್ಫೋಟದ ಸದ್ದು ಕೇಳಿಬಂದು, ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಇದೇ ಕಾರಣಕ್ಕೆ ಮಧ್ಯಪ್ರಾಚ್ಯದಲ್ಲಿ ಮತ್ತೆ ಸೇನಾ ಉದ್ವಿಗ್ನತೆಯೂ ಹೆಚ್ಚಾಗಿ ಯುದ್ಧ ಶುರುವಾಗಿದೆ. ದಾಳಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ನಡೆಸಿದ್ದೇವೆ ಎಂದು ಈಗ ಇಸ್ರೇಲ್ ಹೇಳಿಕೊಂಡಿದ್ದು ರಾಜತಾಂತ್ರಿಕ ಮಾತುಕತೆ ಮೂಲಕ ಸಮಸ್ಯೆ ಪರಿಹಾರವಾಗುವ ನಿರೀಕ್ಷೆಯೂ ಈಗ ಹುಸಿಯಾಗಿದೆ. ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್, ಸೇನಾ ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯೆ ನೀಡಿ ಗುಡುಗಿದ್ದಾರೆ. ಭದ್ರತೆಗೆ ಧಕ್ಕೆ ಉಂಟುಮಾಡುವ ಅಪಾಯ ನಿವಾರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.