ಹಿರಿಯಡಕ : ಹಿರಿಯಡಕ ಸಮೀಪದ ಅಂಗನವಾಡಿ ಕೇಂದ್ರಗಳಿಗೆ ಆಹಾರ ಸರಬರಾಜು ನಡೆಸುವ ಎಮ್.ಎಸ್.ಪಿ.ಸಿ. ಯ ಪ್ರಧಾನ ಕಚೇರಿಯಲ್ಲಿ ಕೋಟ್ಯಂತರ ರೂ. ಗೋಲ್ ಮಾಲ್ ನಡೆದಿದೆ ಎಂದು ಅದರ ಅಧ್ಯಕ್ಷರು ಮತ್ತು ಸದಸ್ಯರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ದೂರು ನೀಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಎಮ್.ಎಸ್.ಪಿ.ಸಿ. ಯಲ್ಲಿ ಲೆಕ್ಕಪತ್ರ ನಿರ್ವಹಣೆ ಮಾಡುವ ಭವ್ಯ ಶೆಟ್ಟಿ ಎಂಬಾಕೆ ಅದರಲ್ಲಿ ಕೋಟ್ಯಂತರ ರೂಪಾಯಿ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಎಮ್.ಎಸ್.ಪಿ.ಸಿ. ಯ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಖಜಾಂಚಿಯವರು ಉಡುಪಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಿಗೆ ದೂರು ನೀಡಿದ್ದಾರೆ.
ಭವ್ಯ ಶೆಟ್ಟಿಯನ್ನು ಎಮ್.ಎಸ್.ಪಿ.ಸಿ.ಯ ಕೆಲಸದಿಂದ ವಜಾಗೊಳಿಸಬೇಕು ಮತ್ತು ಆಕೆ ಕೋಟ್ಯಂತರ ರೂಪಾಯಿ ಹಣ ಗೋಲ್ ಮಾಲ್ ಮಾಡಿರುವ ಬಗ್ಗೆ ತನಿಖೆಯಾಗಿ, ಆಕೆಯ ವಿರುದ್ಧ ಪೊಲೀಸ್ ಕೇಸ್ ದಾಖಲಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.