ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಅವರನ್ನು ಮದುವೆಯಾದಾಗಿನಿಂದ ಸಂಸಾರ, ಮಕ್ಕಳು ಅಂತ ಫುಲ್ ಬ್ಯುಸಿಯಾಗಿದ್ದಾರೆ. ಆದರೆ ತಮ್ಮ ಫ್ಯಾನ್ಸ್ ಜೊತೆ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕದಲ್ಲಿದ್ದಾರೆ. ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೆ ಟ್ರೀಟ್ ನೀಡುತ್ತಿರುತ್ತಾರೆ.
ಚಂದನವನದ ಎವರ್ಗ್ರೀನ್ ಬ್ಯೂಟಿಫುಲ್ ನಟಿ ರಾಧಿಕಾ ಪಂಡಿತ್. ಇವರು ಕೆಲವು ವರ್ಷಗಳಿಂದ ಸಿನಿ ರಂಗದಿಂದ ದೂರವೇ ಉಳಿದಿದ್ದಾರೆ. ಹಾಗಂತ ಅಭಿಮಾನಿಗಳಿಗೆ ರಾಧಿಕಾ ಮೇಲಿನ ಕ್ರೇಜ್ ಕಮ್ಮಿಯಾಗಿಲ್ಲ.ನಟಿ ರಾಧಿಕಾ ಪಂಡಿತ್ ಮಗಳು ಐರಾ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.
ಇದೀಗ ಮಗಳು ಐರಾ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಸ್ಟಾರ್ ಕಿಡ್ಸ್ ಅಂದ್ರೆ ಹಾಗೆನೇ.. ಯಶ್ ಮಗಳಿಗೂ ಈಗಾಗಲೇ ದೊಡ್ಡ ಅಭಿಮಾನಿ ಬಳಗ ಇದೆ. ಸಣ್ಣ ವಯಸ್ಸಾದರೂ, ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ರಾಧಿಕಾ ಮತ್ತು ಯಶ್ ಮಕ್ಕಳ ಜೊತೆಗಿನ ಫೋಟೋ ಮತ್ತು ವಿಡಿಯೋ ಹಂಚಿಕೊಳ್ಳುತ್ತಲೇ ಇರುತ್ತಾರೆ. ಸದ್ಯ ರಾಧಿಕಾ ಹಂಚಿಕೊಂಡಿರುವ ಫೋಟೋ ಗಮನ ಸೆಳೆದಿದೆ.
ಚಂದನವನದ ಮಾದರಿ ದಂಪತಿ: ಯಶ್ ಮತ್ತು ರಾಧಿಕಾ ‘ಮೊಗ್ಗಿನ ಮನಸು’ ಸಿನಿಮಾ ಮೂಲಕ ಜೊತೆಯಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಆ ಬಳಿಕ ಈ ಜೋಡಿ ಅಭಿನಯಿಸಿದ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಅದಾಗಲೇ ಇವರಿಬ್ಬರು ಜಸ್ಟ್ ಪ್ರೆಂಡ್ಸ್ ಅಲ್ಲ ಎಂಬುದು ಕನ್ನಡ ಪ್ರೇಕ್ಷಕರಿಗೆ ಅರಿವಾಗಿತ್ತು. ‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಚಿತ್ರ ಈ ಎಲ್ಲಾ ಗಾಸಿಪ್ಗಳಿಗೆ ವಿದಾಯ ಹೇಳಿ ಕನ್ನಡಕ್ಕೆ ಹೊಸ ತಾರಾ ಜೋಡಿಯನ್ನು ನೀಡುವ ಭರವಸೆ ಕೊಟ್ಟಿತು.ರಾಧಿಕಾ ಪಂಡಿತ್ ಗಲ್ಲದ ಮೇಲೆ ಕೈ ಇಟ್ಟು ಪೋಸ್ ಕೊಟ್ಟಿದ್ದಾರೆ. ಅದೇ ಮಾದರಿಯಲ್ಲಿ ಅಮ್ಮನನ್ನು ಅನುಕರಿಸುವಂತೆ ಐರಾ ಕೂಡ ಪೋಸ್ ನೀಡಿದ್ದಾರೆ. ಕ್ಯಾಮರಾಗೆ ಪೋಸ್ ಕೊಡೋದ್ರಲ್ಲಿ ರಾಧಿಕಾ ಪಂಡಿತ್ ಅವರನ್ನು ಮೀರಿಸಿದ್ದಾರೆ ಐರಾ. ಪುಟಾಣಿ ಚೆಲುವೆಯ ಕ್ಯೂಟ್ನೆಸ್ ನೋಡುಗರನ್ನು ಆಕರ್ಷಿಸಿದೆ. ಇಬ್ಬರು ಸಿಂಪಲ್ ಆಗಿ ಕಾಣುತ್ತಿದ್ದು, ಮನೆಯಲ್ಲೇ ಫೋಟೋ ತೆಗೆದುಕೊಂಡಿದ್ದಾರೆ.
ಇದಾಗಿ ಕೆಲವೇ ದಿನಗಳಲ್ಲಿ ಗೋವಾದಲ್ಲಿ ವಿಜೃಂಭಣೆಯಿಂದ ನಿಶ್ಚಿತಾರ್ಥ ಮಾಡಿಕೊಂಡರು. ಡಿಸೆಂಬರ್ 9, 2016ರಂದು ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಮುನ್ನುಡಿ ಬರೆದರು. ತಾರಾ ದಂಪತಿಗೆ ಐರಾ ಮತ್ತು ಯಥರ್ವ ಎಂಬ ಇಬ್ಬರು ಮುದ್ದು ಮಕ್ಕಳಿದ್ದು, ಸುಖ ಸಂಸಾರ ನಡೆಸುತ್ತಿದ್ದಾರೆ.ರಾಧಿಕಾ ಮತ್ತು ಐರಾ ಫೋಟೋಗಳು 5 ಗಂಟೆಯಲ್ಲಿ 2 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ಬಗೆ ಬಗೆಯ ಕಮೆಂಟ್ಗಳು ಬಂದಿವೆ. ‘ಇಬ್ಬರು ತುಂಬಾ ಕ್ಯೂಟ್’ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ‘ಅಮ್ಮ ಮಗಳು ಸೇಮ್ ಟು ಸೇಮ್’ ಎಂದಿದ್ದಾರೆ. ಸ್ಯಾಂಡಲ್ವುಡ್ ನಟಿಯರಾದ ಮಾನ್ವಿತಾ ಕಾಮತ್ ಮತ್ತು ಶಾನ್ವಿ ಶ್ರೀವಾತ್ಸವ್, ‘ಸೋ ಕ್ಯೂಟ್’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ‘ತಾಯಿಗೆ ತಕ್ಕ ಮಗಳು’ ಎಂದಿದ್ದಾರೆ.