ಐಪಿಎಲ್ 12ನೇ ಆವೃತ್ತಿಯ ಹರಾಜು ಪ್ರಕ್ರಿಯೆ:ಯುವಿಗೆ ಮೊದಲ ಬಿಡ್‍ನಲ್ಲಿ ಶಾಕ್

ಜೈಪುರ:ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್ 12ನೇ ಆವೃತ್ತಿಗಾಗಿನ ಆಟಗಾರರ ಹರಾಜು ಪ್ರಕ್ರಿಯೆ ಪಿಂಕ್‌ ಸಿಟಿ ಜೈಪುರದಲ್ಲಿ ನಡೆದಿದ್ದು .ಆಲ್‍ರೌಂಡರ್ ಯುವರಾಜ್ ಸಿಂಗ್‍ ಮೊದಲ ಬಿಡ್‍ನಲ್ಲಿ ಅನ್‍ಸೋಲ್ಡ್ ಎಂದು  ಘೋಷಿಸಲಾಯಿತು.ನಂತರ ಯುವಿ ಮುಂಬಯಿ  ಇಂಡಿಯನ್ಸ್ ಪಾಲಾಗಿದ್ದಾರೆ.  ಇತ್ತ ಟೀಂ ಇಂಡಿಯಾದ ಆಟಗಾರರಾದ ಚೇತೇಶ್ವರ ಪೂಜಾರ, ಮನೋಜ್ ತಿವಾರಿ, ಅಕ್ಷದೀಪ್ ನಾಥ್, ಮಿಥುನ್ ಅಭಿಮನ್ಯು, ವಿನಯ್ ಕುಮಾರ್, ಸೌರಭ್ ತಿವಾರಿ, ಇಂಗ್ಲೆಂಡ್ ಆಟಗಾರ ಅಲೆಕ್ಸ್ ಹೆಲ್ಸ್, ನ್ಯೂಜಿಲೆಂಡಿನ ಮಾರ್ಟಿನ್ ಗುಪ್ಟಿಲ್ ಹಾಗೂ ಬ್ರೆಂಡನ್ ಮೆಕಲಮ್, ದಕ್ಷಿಣ ಆಫ್ರಿಕಾದ ವೇಗಿಗಳಾದ ಡೇಲ್ ಸ್ಟೈನ್ ಮತ್ತು ಮೊರ್ನೆ ಮಾರ್ಕೆಲ್, ಆಸ್ಟ್ರೇಲಿಯಾದ ಕೇನ್ ರಿಚರ್ಡ್ ಸನ್, ಗ್ಲೆನ್ ಪಿಲಿಪ್ಸ್, ಕುಸಾನ್ ಪರೇರಾ, ಜೇಸನ್ ಹೋಲ್ಡರ್, ಪರ್ವೆಜ್ ರಸೂಲ್, ಆ್ಯಂಗಲೋ ಮ್ಯಾಥ್ಯೂನ್, ಜೇಮ್ಸ್ ನಿಶಂ, ಹಾಶೀಮ್ ಆಮ್ಲಾ, ಶಾನ್ ಮಾರ್ಶ್, ಉಸ್ಮಾನ್ ಖಾನ್ ಮಾರಾಟವಾಗದೆ ಉಳಿದಿದ್ದಾರೆ.

ಐಪಿಎಲ್ 12ನೇ ಆವೃತ್ತಿಯ ಹರಾಜು ಪ್ರಕ್ರಿಯೆ ,ಯಾರು ಎಷ್ಟಕ್ಕೆ ಮಾರಾಟವಾದ್ರು?:
ಎಡಗೈ ವೇಗಿ ಜಯದೇವ್ ಉನದ್ಕತ್ ಅವರನ್ನು ಈ ಬಾರಿಯೂ ರಾಜಸ್ಥಾನ ರಾಯಲ್ಸ್ 8.4 ಕೋಟಿ ರೂ. ನೀಡಿ ಖರೀದಿ ಮಾಡಿದೆ. ಲೂಕಿ ಫೆಗ್ರ್ಯೂಸನ್ ಅವರನ್ನು ಕೆಕೆಆರ್ 1.6 ಕೋಟಿ ರೂ.ಗೆ ಖರೀದಿಸಿದೆ. ಬರಿಂದರ್ ಸ್ರಾನ್ ಮುಂಬೈ ಇಂಡಿಯನ್ಸ್ (3.4 ಕೋಟಿ), ಹೆನ್ರಿ ಕ್ಲಾಸೆನ್ ಆರ್ ಸಿಬಿ (50 ಲಕ್ಷ), ಸ್ಯಾಮ್ ಕರ್ರನ್ ಕಿಂಗ್ಸ್ ಇಲೆವೆನ್ ಪಂಜಾಬ್ (7.2 ಕೋಟಿ), ಕಾಲಿನ್ ಇನ್‍ಗ್ರಾಂ ಡೆಲ್ಲಿ ಕ್ಯಾಪಿಟಲ್ಸ್(6.4 ಕೋಟಿ), ನಾಥು ಸಿಂಗ್ ಡೆಲ್ಲಿ ಕ್ಯಾಪಿಟಲ್ಸ್ (20 ಲಕ್ಷ), ಅಂಕುಶ್ ಬೈನ್ಸ್ ಡೆಲ್ಲಿ ಕ್ಯಾಪಿಟಲ್ಸ್ (20 ಲಕ್ಷ), ಅಮೋಲ್ ಪ್ರೀತ್ ಸಿಂಗ್ ಮುಂಬೈ ಇಂಡಿಯನ್ಸ್ (80 ಲಕ್ಷ), ದೇಬದತ್ ಪಡಿಕ್ಕಲ್ ಆರ್‌ಸಿಬಿ (20 ಲಕ್ಷ), ಮೋಹಿತ್ ಶರ್ಮಾ ಚೆನ್ನೈ ಸೂಪರ್ ಕಿಂಗ್ಸ್ (5 ಕೋಟಿ), ವರುನ್ ಅರೋನ್ ರಾಜಸ್ಥಾನ ರಾಯಲ್ಸ್ (2.4 ಕೋಟಿ), ಮೊಹಮ್ಮದ್ ಶಮಿ ಕಿಂಗ್ಸ್ ಇಲೆವೆನ್ ಪಂಜಾಬ್ (4.8 ಕೋಟಿ), ಇಶಾಂತ್ ಶರ್ಮಾ ಡೆಲ್ಲಿ ಕ್ಯಾಪಿಟಲ್ಸ್ (1.1 ಕೋಟಿ), ವೃದ್ಧಿಮಾನ್ ಸಹಾ ಸನ್‍ರೈಸರ್ಸ್ ಹೈದರಾಬಾದ್ (1.2 ಕೋಟಿ), ನಿಕೋಲ್ ಪೂರನ್ ಕಿಂಗ್ಸ್ ಇಲೆವೆನ್ ಪಂಜಾಬ್ (4.2 ಕೋಟಿ), ಜಾನಿ ಬೇನ್ ಸ್ಟೋ ಸನ್‍ರೈಸರ್ಸ್ ಹೈದರಾಬಾದ್ (2.2 ಕೋಟಿ), ಅಕ್ಷರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ (5 ಕೋಟಿ), ಗುರ್‍ಕೀರಾತ್ ಸಿಂಗ್ ಆರ್‌ಸಿಬಿ (50 ಲಕ್ಷ), ಮೊಯಿಸಿಸ್ ಹೆನ್ರಿಕ್ಸ್ ಕಿಂಗ್ಸ್ ಇಲೆವೆನ್ ಪಂಜಾಬ್ (1 ಕೋಟಿ), ಕಾರ್ಲಸ್ ಬ್ರಾತ್‍ವೇಟ್ ಕೋಲ್ಕತ್ತಾ ನೈಟ್ ರೈಡರ್ಸ್ (5 ಕೋಟಿ), ಶಿಮ್ರಾನ್ ಹೆಟ್ಮಯಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (4.2 ಕೋಟಿ), ಹನುಮ ವಿಹಾರಿ ಡೆಲ್ಲಿ ಕ್ಯಾಪಿಟಲ್ಸ್ ( 2 ಕೋಟಿ).