ಉಡುಪಿ: ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಬೀಡಿ / ಸುಣ್ಣ ಕಲ್ಲು ಮತ್ತು ಡಾಲೋಮೈಟ್ / ಕಬ್ಬಿಣದ ಗಣಿಗಳು, ಕ್ರೋಮ್, ಮ್ಯಾಂಗನೀಸ್ ಅದಿರಿನ ಗಣಿಗಳು / ಚಲನಚಿತ್ರ ಕ್ಷೇತ್ರ ಇವುಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳಿಗೆ ಪ್ರಸಕ್ತ ಸಾಲಿನಲ್ಲಿ ಶಿಕ್ಷಣಕ್ಕಾಗಿ ಆರ್ಥಿಕ ನೆರವಿನ ಅನುದಾನ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಒಂದನೇ ತರಗತಿಯಿಂದ ಪದವಿ ಕೋರ್ಸ್ವರೆಗೆ, ವೃತ್ತಿಪರ ಹಾಗೂ ವೃತ್ತಿಪರ ರಹಿತ, ಐಟಿಐ ಕೋರ್ಸ್ಗಳಿಗೆ ನ್ಯಾಷನಲ್ ಸ್ಕಾಲರ್ ಷಿಪ್ ಪೋರ್ಟಲ್ https://scholarships.gov.in ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅಕ್ಟೋಬರ್ ೩೧ ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0120-6619540 [email protected]ಅಥವಾ ಇ-ಮೇಲ್ ಸಂಪರ್ಕಿಸುವಂತೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಲ್ಯಾಣ ಮತ್ತು ಉಪಕರ ಆಯುಕ್ತರ ಕಚೇರಿ ಪ್ರಕಟನೆ ತಿಳಿಸಿದೆ.