ಅ.10 ರಂದು ಆರೋಗ್ಯ ಇಲಾಖೆಯ ಖಾಲಿ ಹುದ್ದೆಗಳಿಗೆ ನೇರ ಸಂದರ್ಶನ

ಉಡುಪಿ: ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ನಮ್ಮ ಕ್ಲಿನಿಕ್‌ನಲ್ಲಿ ಖಾಲಿ ಇರುವ
ಹೆರಿಗೆ ತಜ್ಞರು -03 ಹುದ್ದೆ, (ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಕಾರ್ಕಳ ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರ), ವೈದ್ಯಾಧಿಕಾರಿಗಳು-05 ಹುದ್ದೆ (ಕುಂದಾಪುರದ ಟಿ.ಟಿ ರೋಡ್‌ನ ನಮ್ಮ ಕ್ಲಿನಿಕ್ ಹಾಗೂ ಖಾರ್ವಿಕೇರಿಯ ನಮ್ಮ ಕ್ಲಿನಿಕ್, ಕಾರ್ಕಳ ಮರೀನಾಪುರದ ನಮ್ಮ ಕ್ಲಿನಿಕ್, ಕುಂದಾಪುರ ಹಾಗೂ ಕಾರ್ಕಳದ ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಉಡುಪಿಯ ಜಿಲ್ಲಾ ಆಸ್ಪತ್ರೆ), ಆಡಿಯೋಮೆಟ್ರಿಕ್ ಅಸಿಸ್ಟೆಂಟ್ -01 ಹುದ್ದೆ, ಯಂಗ್ ಹಿಯರಿಂಗ್ ಇಂಪೈರಿಡ್ ಚಿಲ್ಡ್ರನ್ ಇನ್ ಸ್ಟ್ರಕ್ಟರ್ -01 ಹುದ್ದೆ (ಜಿಲ್ಲಾ ಆಸ್ಪತ್ರೆ) ಹಾಗೂ ಎಲ್.ಹೆಚ್.ವಿ -01 (ಉಡುಪಿಯ ನಗರ ಆರೋಗ್ಯ ಕೇಂದ್ರ) ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಆಸಕ್ತ ಅಭ್ಯರ್ಥಿಗಳಿಗೆ ಅಕ್ಟೋಬರ್ 10 ರಂದು ಬೆಳಗ್ಗೆ 10.30 ರಿಂದ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ನೇರ ಸಂದರ್ಶನ ನಡಯಲಿದೆ.

ಅಭ್ಯರ್ಥಿಗಳು ಶೈಕ್ಷಣಿಕ ಮೂಲ ದಾಖಲಾತಿಗಳೊಂದಿಗೆ ಸಂದರ್ಶನದಲ್ಲಿ ಹಾಜರಾಗುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘಧ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.