ದೊಡ್ಡಣ್ಣ ಗುಡ್ಡೆ: ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಆವರಣದಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅಧ್ಯಕ್ಷತೆಯಲ್ಲಿ ಕಾರ್ಯಾರಂಭಗೊಂಡಿರುವ ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲ್ಪಟ್ಟಿತು.
ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಅನಿಶ್ ಆಚಾರ್ಯ ಅವರು ದೀಪ ಪ್ರಜ್ವಲಿಸಿ ಹಾಗೂ ಶಿಕ್ಷಕಿಯರು ಯೋಗ ಗೀತೆಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಿವೃತ್ತ ಉಪನ್ಯಾಸಕಿ ಶ್ರೀಮತಿ ಚಂದ್ರಕಲಾ ಕೊರಂಗ್ರಪಾಡಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಯೋಗದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು.
ಶಿವ ಪುರಾಣದಲ್ಲಿ ಉಲ್ಲೇಖವಿರುವ ಪತಂಜಲಿ ಮುನಿಯ ಬಗ್ಗೆ ಮಕ್ಕಳಿಗೆ ಕಥೆಯನ್ನು ಹೇಳಿ ಮಾನಸಿಕ ಹಾಗೂ ದೈಹಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವಲ್ಲಿ ಸರ್ವರು ಯೋಗಭ್ಯಾಸವನ್ನು ಮಾಡಲೇಬೇಕು ಎಂದು ಮನವರಿಕೆ ಮಾಡಿದರು.
ಶಾಲಾ ಯೋಗ ಶಿಕ್ಷಕಿ ಶ್ರೀಮತಿ ತ್ರಿವೇಣಿ ಭಟ್ ಮಾರ್ಗದರ್ಶನದಲ್ಲಿ ಮಕ್ಕಳಿಗೆ ಯೋಗಭ್ಯಾಸ ಮಾಡಿಸಿದರು.
ದೈಹಿಕ ಶಿಕ್ಷಕ ರಾಘವೇಂದ್ರ ಯು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಪೂರ್ಣಿಮಾ ಸ್ವಾಗತಿಸಿ, ತೀರ್ಥಕಲಾ ವಂದಿಸಿ, ರೇವತಿ ಕಾರ್ಯಕ್ರಮ ನಿರೂಪಿಸಿದರು.