ಮಂಗಳೂರು: ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ), ಆಂಜೆಲೊರ್ ಘಟಕ ಮತ್ತು ಅಂತರ್ಧರ್ಮೀಯ ಸಂವಾದ ಆಯೋಗ, ಆಂಜೆಲೊರ್ ಚರ್ಚ್ ವತಿಯಿಂದ ಪುರುಷರಿಗೆ ವಾಲಿಬಾಲ್ ಹಾಗೂ ಮಹಿಳೆಯರಿಗೆ ತ್ರೋಬಾಲ್ ಪಂದ್ಯಾವಳಿಯನ್ನು ಡಿಸೆಂಬರ್ 10 ರಂದು ಬೆಳಿಗ್ಗೆ 8.45 ಕ್ಕೆ ಕಪಿತಾನಿಯೊ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ. ಸರ್ವ ಧರ್ಮದವರು ಕಟ್ಟಿ ಬೆಳೆಸಿದ ಮಂಗಳೂರು ಸೌಹಾರ್ದತೆಯಿಂದ ಕೂಡಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಈ ಲಯವನ್ನು ಇನ್ನೂ ಉತ್ತಮ ರೀತಿಯಲ್ಲಿ ಬೆಳೆಸಲು ಈ ಕ್ರೀಡಾ ಪಂದ್ಯಾವಳಿಯನ್ನು ಕಥೊಲಿಕ್ ಸಭಾ(ರಿ) ಆಂಜೆಲೊರ್ ಘಟಕದ ವತಿಯಿಂದ ಆಯೋಜಿಸಲಾಗಿದೆ ಎಂದು ಅಂತರ್ ಧರ್ಮೀಯ ಆಯೋಗದ ಸಂಚಾಲಕ ಫೆಲಿಕ್ಸ್ ಮೊರಾಸ್ ಮಾಹಿತಿ ನೀಡಿದರು.
ಶುಕ್ರವಾರದಂದು ನಗರದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಸ್ಪರ್ಧೆಯ ನಿಯಮಗಳು:
1.ವಾಲಿಬಾಲ್ ತಂಡದಲ್ಲಿ 9 ಕ್ರೀಡಾಳುಗಳಿದ್ದು, 6 ಕ್ರೀಡಾಳುಗಳು ಆಡಬೇಕು. (ಮೂವರು ಬದಲಿಗಾಗಿ)
2.ತ್ರೋಬಾಲ್ ತಂಡದಲ್ಲಿ 10 ಕ್ರೀಡಾಳುಗಳಿದ್ದು, 7 ಕ್ರೀಡಾಳುಗಳು ಆಡಬೇಕು. (ಮೂವರು ಬದಲಿಗಾಗಿ)
3.ವಯಸ್ಸಿನ ಮಿತಿಯಿಲ್ಲ.
4.ತಂಡದಲ್ಲಿ 4 ಕ್ರೀಡಾಳುಗಳು ಕ್ರೈಸ್ತೇತರಿರಬೇಕು ಮತ್ತು ಆಟದಲ್ಲಿ ಕಡ್ಡಾಯವಾಗಿ ಕನಿಷ್ಠ 2 ಕ್ರೀಡಾಳುಗಳಿರಬೇಕು.
5.ಈ ಪಂದ್ಯಾಟವು ಸಿಟಿ ಮತ್ತು ಎಪಿಸ್ಕೋಪಲ್ ಸಿಟಿ ಕ್ಷೇತ್ರಗಳ ಚರ್ಚುಗಳಿಗೆ ಸೀಮಿತವಾಗಿದ್ದು, ಒಂದು ಚರ್ಚಿನಿಂದ ಒಂದಕ್ಕಿಂತ ಹೆಚ್ಚು ಪಂಗಡಗಳು ಭಾಗವಹಿಸಬಹುದು.
6.ಪ್ರಥಮ ಮತ್ತು ದ್ವಿತೀಯ ಬಹುಮಾನದೊಂದಿಗೆ ಟ್ರೋಫಿಯನ್ನು ನೀಡಲಾಗುವುದು.
7.ಭಾಗವಹಿಸುವ ಪ್ರತಿಯೊಂದು ಪಂಗಡಗಳಿಗೆ ಸಂಭಾವನೆ ನೀಡಲಾಗುವುದು.
ಹೆಚ್ಚಿನ ವಿವರಗಳಿಗೆ ಸ್ಪರ್ಧೆಯ ಸಂಚಾಲಕರಾದ ಫೆಲಿಕ್ಸ್ ಮೊರಾಸ್: 9448476546 ಅಥವಾ
ಅಂತರ್ ಧರ್ಮೀಯ ಸಂವಾದ ಆಯೋಗದ ಕಾರ್ಯದರ್ಶಿ ರಾಜೇಶ್ ಮಿಸ್ಕಿತ್: 9448428113 ಇವರನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.
ಆಂಜೆಲೊರ್ ಘಟಕ ಕಥೊಲಿಕ್ ಸಭಾಧ್ಯಕ್ಷ ರೋಶನ್ ಪತ್ರಾವೊ, ಆಂಜೆಲೊರ್ ಚರ್ಚಿನ ಧರ್ಮಗುರು ವಂದನೀಯ ವಿಲ್ಯಮ್ ಮಿನೇಜಸ್, ಅಂತರ್ ಧರ್ಮೀಯ ಆಯೋಗದ ಸಂಚಾಲಕ ರೊಯ್ ಕ್ಯಾಸ್ಟಲಿನೊ, ಕಾರ್ಯದರ್ಶಿ ರಾಜೇಶ್ ಮಿಸ್ಕಿತ್, ಪಾಲನಾ ಮಂಡಳಿ ಕಾರ್ಯದರ್ಶಿ ಲೊಲಿನಾ ಡಿಸೋಜಾ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.