777 ಚಾರ್ಲಿಯಿಂದ ಸ್ಪೂರ್ತಿ ಪಡೆದು ಸ್ನಿಫರ್ ನಾಯಿಗೆ ಚಾರ್ಲಿ ಎಂದು ನಾಮಕರಣ ಮಾಡಿದ ಮಂಗಳೂರು ನಗರ ಪೊಲೀಸರು

ಬೆಂಗಳೂರು: ರಕ್ಷಿತ್ ಶೆಟ್ಟಿ ಅವರ ಹೊಸ ಚಿತ್ರ ‘777 ಚಾರ್ಲಿ’ ಯಿಂದ ಸ್ಫೂರ್ತಿ ಪಡೆದ ಮಂಗಳೂರು ನಗರ  ಪೊಲೀಸ್ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಗಳು ತಮ್ಮ ಇಲಾಖೆಯ ಹೊಸ ಸ್ನಿಫರ್ ಆಫೀಸರ್‌ ನಾಯಿಗೆ ಚಾರ್ಲಿ ಎನ್ನುವ ಹೆಸರನ್ನಿಟ್ಟಿದ್ದಾರೆ. ಇದು ಮೂರು ತಿಂಗಳ ಹೆಣ್ಣು ಲ್ಯಾಬ್ರಡಾರ್ ರಿಟ್ರೈವರ್ ಆಗಿದ್ದು ನೋಡುವುದಕ್ಕೆ ಚಾರ್ಲಿಯಂತೆಯೆ ಇದೆ.