ಬೆಂಗಳೂರು: ಭಾರತದ ಮುಂದಿನ ಒಲಿಂಪಿಕ್ ಚಾಂಪಿಯನ್ನರನ್ನು ಬೆಳೆಸುವ ಉದ್ದೇಶದಿಂದ ನಿರ್ಮಿಸಲಾದ ವಿಶ್ವಮಟ್ಟದ ಹೈ-ಪರ್ಫಾರ್ಮೆನ್ಸ್ ಕೇಂದ್ರವಾದ ಇನ್‍ಸ್ಪೈರ್ ಇನ್‍ಸ್ಟಿಟ್ಯೂಟ್ ಆಫ್ ಸ್ಪೋರ್ಟ್ (IIS) ಇಂದು ತನ್ನ ಹೊಸ ಡಿಜಿಟಲ್ ಕಲಿಕಾ ವೇದಿಕೆಯನ್ನು ‘IIS Sikhaega’ ಎಂಬ ಹೆಸರಿನಲ್ಲಿ ಪ್ರಾರಂಭಿಸಿದೆ.
ಈ ಯೋಜನೆಯ ಮೂಲಕ ಕ್ರೀಡಾಪಟುಗಳು ತಮ್ಮ ಕೈಬೆರಳ ತುದಿಯಲ್ಲಿ ವಿಶ್ವಮಟ್ಟದ ಕ್ರೀಡಾ ಜ್ಞಾನವನ್ನು ಪಡೆಯಲು ಸಾಧ್ಯವಾಗುತ್ತದೆ.ಸುಲಭವಾಗಿ ಅರ್ಥವಾಗುವ ಚಿಕ್ಕ-ಚಿಕ್ಕ ವೀಡಿಯೊಗಳ ಮೂಲಕ IIS ನ ತರಬೇತುದಾರರು, ಕೋಚ್‌ಗಳು, ತಜ್ಞರು ಹಾಗೂ ಯುವ ಕ್ರೀಡಾಪಟುಗಳ ಅನುಭವವನ್ನು ಹಂಚಿಕೊಳ್ಳುತ್ತಾರೆ. ಫಿಟ್‍ನೆಸ್‌ನ ಮೂಲಭೂತಗಳಿಂದ ಹಿಡಿದು ಹೈ-ಪರ್ಫಾರ್ಮೆನ್ಸ್ ಕ್ರೀಡೆಯ ಸೂಕ್ಷ್ಮ ಅಂಶಗಳವರೆಗೂ ತಿಳಿಯಲು IIS Sikhaega ಕ್ರೀಡಾಪಟುಗಳಿಗೆ ಮಾರ್ಗದರ್ಶನ ಒದಗಿಸುತ್ತದೆ.ತಿ ತಿಂಗಳು ಮೂರು ವೀಡಿಯೊಗಳನ್ನು ಇನ್‍ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಕ್ರೀಡಾಪಟಗಳಿಗೆ ಇದು ಉಪಯುಕ್ತವಾಗಲಿದೆ.
ಐ ಬಗ್ಗೆ ಮಾತನಾಡಿದ ಇನ್‍ಸ್ಪೈರ್ ಇನ್‍ಸ್ಟಿಟ್ಯೂಟ್ ಆಫ್ ಸ್ಪೋರ್ಟ್ ಅಧ್ಯಕ್ಷೆ ಮನೀಷಾ ಮಲ್ಹೋತ್ರಾ “ಭಾರತದ ಎಲ್ಲಾ ಕ್ರೀಡಾಪಟುಗಳಿಗೆ IIS ನ ಪರಿಣಿತಿ ಮತ್ತು ತರಬೇತಿ ತಲುಪುವುದು ನಮ್ಮ ಧ್ಯೇಯದ ಒಂದು ಭಾಗ. IIS Sikhaega ಮೂಲಕ, ನಮ್ಮ ಕೋಚ್‌ಗಳು, ಸೌಲಭ್ಯಗಳು ಹಾಗೂ ತಾಂತ್ರಿಕ ತಿಳುವಳಿಕೆಯನ್ನು IIS ಹೊರಗಿನ ಯುವಕರಿಗೂ ತಲುಪಿಸಲು ಬಯಸುತ್ತೇವೆ ಎಂದರು’.
ಈ ಯೋಜನೆಯ ಮೂಲಕ IIS, ತಂತ್ರಜ್ಞಾನ, ಪರಿಣಿತಿ ಮತ್ತು ಲಭ್ಯತೆಯನ್ನು ಒಟ್ಟುಗೂಡಿಸಿ ಭಾರತದ ಮುಂದಿನ ತಲೆಮಾರಿನ ಕ್ರೀಡಾಪಟುಗಳನ್ನು ಬೆಳೆಸುವ ತನ್ನ ಧ್ಯೇಯವನ್ನು ಮತ್ತಷ್ಟು ಬಲಪಡಿಸುತ್ತಿದೆ. IIS Sikhaega ಕೇವಲ ಡಿಜಿಟಲ್ ಪ್ರಾರಂಭವಲ್ಲ – ಇದು ಭಾರತದ ಕ್ರೀಡಾ ಸಂಸ್ಕೃತಿಯನ್ನು ಬಲಪಡಿಸುವತ್ತ ಒಂದು ಹೆಜ್ಜೆ ಆಗಿರಲಿದೆ.












