ಆಧಾರ್ ಗೆ ಲಿಂಕ್ ಮಾಡದ ಪ್ಯಾನ್ ಖಾತೆಗಳು ಹೆಚ್ಚಿನ ಟಿಡಿಎಸ್-ಟಿಸಿಎಸ್ ಗೆ ಕಾರಣವಾಗಬಹುದು: ಆದಾಯ ತೆರಿಗೆ ಇಲಾಖೆ

ನವದೆಹಲಿ: ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡದ ಕಾರಣ ಕಾರ್ಯನಿರತವಲ್ಲದ(inoperative) ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ನಿಷ್ಕ್ರಿಯ ಪ್ಯಾನ್‌(inactive)ಗೆ ಸಮಾನವಾಗಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.

ಕಾರ್ಯಾಚರಣೆಯಲ್ಲಿ ಇಲ್ಲದ ಪ್ಯಾನ್ ನಿಷ್ಕ್ರಿಯ ಪ್ಯಾನ್ ಅಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಪ್ಯಾನ್- ಆಧಾರ್ ಲಿಂಕ್ ಆಗಿರುವುದನ್ನು ಲೆಕ್ಕಿಸದೆ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅನ್ನು ಸಲ್ಲಿಸಬಹುದು ಎಂದು ತೆರಿಗೆ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಆದಾಗ್ಯೂ, ಬಾಕಿ ಉಳಿದಿರುವ ಮರುಪಾವತಿಗಳು ಮತ್ತು ಅಂತಹ ಮರುಪಾವತಿಗಳ ಮೇಲಿನ ಬಡ್ಡಿಯನ್ನು ಇಂತಹ ಪ್ಯಾನ್ ಗಳಿಗೆ ನೀಡಲಾಗುವುದಿಲ್ಲ ಎಂದು ಅದು ಹೇಳಿದೆ.

ಅಂತಹ ಪ್ಯಾನ್‌ಗಳಿಗೆ ಮೂಲದಲ್ಲಿ ಕಡಿತಗೊಳಿಸಲಾದ ತೆರಿಗೆಯನ್ನು (TDS) ಹೆಚ್ಚಿನ ದರದಲ್ಲಿ ಕಡಿತಗೊಳಿಸಲಾಗುವುದು. ಅದೇ ರೀತಿ, ಮೂಲದಲ್ಲಿ (TCS) ಸಂಗ್ರಹಿಸಲಾದ ತೆರಿಗೆಯನ್ನು ಕೂಡಾ ಹೆಚ್ಚಿನ ದರದಲ್ಲಿ ಸಂಗ್ರಹಿಸಲಾಗುತ್ತದೆ ಎಂದು ಐ-ಟಿ ಇಲಾಖೆ ತಿಳಿಸಿದೆ.

ಅಧಾರ್-ಪ್ಯಾನ್ ಲಿಂಕ್ ಆಗಿಲ್ಲದಿದ್ದು, ಆದಾಯ ತೆರಿಗೆ ಪಾವತಿಸುವವರು ಹೆಚ್ಚಿನ ಟಿಡಿಎಸ್ ಮತ್ತು ಟಿಸಿಎಸ್ ಅನ್ನು ಪಾವತಿಸಬೇಕಾಗುತ್ತದೆ.

ಭಾರತದ ಸಾಗರೋತ್ತರ ನಾಗರಿಕರು (OCI ಕಾರ್ಡುದಾರರ) ಪ್ಯಾನ್ ಗಳು ಅಥವಾ ಕಳೆದ ಮೂರು ಮೌಲ್ಯಮಾಪನ ವರ್ಷಗಳಲ್ಲಿಐಟಿಆರ್ ಅನ್ನು ಸಲ್ಲಿಸದ ವಿದೇಶಿ ನಾಗರಿಕರ ಪ್ಯಾನ್ ನಿಷ್ಕ್ರಿಯಗೊಳಿಸಲಾಗಿದೆ.

ಪ್ಯಾನ್ ಗಳು ನಿಷ್ಕ್ರಿಯವಾಗಿರುವ ಅನಿವಾಸಿ ಭಾರತೀಯರು (NRI ಗಳು) ಪ್ಯಾನ್ ಡೇಟಾಬೇಸ್‌ನಲ್ಲಿ ತಮ್ಮ ವಸತಿ ಸ್ಥಿತಿಯನ್ನು ನವೀಕರಿಸಲು ವಿನಂತಿಯೊಂದಿಗೆ ಪೋಷಕ ದಾಖಲೆಗಳೊಂದಿಗೆ ತಮ್ಮ ವಸತಿ ಸ್ಥಿತಿಯನ್ನು ಆಯಾ ನ್ಯಾಯವ್ಯಾಪ್ತಿಯ ಮೌಲ್ಯಮಾಪನ ಅಧಿಕಾರಿಗೆ ತಿಳಿಸಲು ವಿನಂತಿಸಲಾಗಿದೆ.

ಆಧಾರ್‌ನೊಂದಿಗೆ ಲಿಂಕ್ ಮಾಡದಿರುವ ಪ್ಯಾನ್‌ಗಳೊಂದಿಗೆ ಐಟಿಆರ್‌ಗಳನ್ನು ಸಲ್ಲಿಸುವ ಕುರಿತು ಎನ್‌ಆರ್‌ಐಗಳು ಸೇರಿದಂತೆ ಹಲವಾರು ತೆರಿಗೆದಾರರು ಕಳವಳ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ಬಂದಿದೆ. ಪ್ರಸಕ್ತ ವರ್ಷ- 2023 ಗಾಗಿ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31 ಆಗಿದೆ.